ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಲೋಪ, ಅಧಿಕಾರಿ ಅಮಾನತು

ದೆಹಲಿಯಿಂದ ಜಿಲ್ಲೆಗೆ ವಾಪಾಸಾದ ತಬ್ಲಿಗ್ ಜಮಾತ್‌ನ ಸದಸ್ಯರ ಮಾಹಿತಿ ಕಲೆ ಹಾಕುವಲ್ಲಿ ಅಸಡ್ಡೆ
Last Updated 5 ಏಪ್ರಿಲ್ 2020, 12:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್‌ 19ಕ್ಕೆ ಸಂಬಂಧಿಸಿದಂತೆ ತಬ್ಲಿಗ್ ಜಮಾತ್‌ನ ಸದಸ್ಯರ ವಿವರ ಪಡೆಯುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಶೇಕ್‌ ಅಲಿ ಅವರನ್ನು ಜಿಲ್ಲಾಧಿಕಾರಿ ಅವರು ಅಮಾನತು ಮಾಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಿದ ಕ್ವಾರಂಟೈನ್ ವ್ಯವಸ್ಥೆಯ ಮೇಲೆ ನಿಗಾ ವಹಿಸಿ ನಿಯಮಿತವಾಗಿ ಮಾಹಿತಿ ನೀಡುವಂತೆ ಶೇಕ್‌ ಅಲಿ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಅಲಿ ಅವರಿಗೆ ಏಪ್ರಿಲ್ 1 ರಂದು ಜಿಲ್ಲಾಧಿಕಾರಿ ಅವರು ದೆಹಲಿಯಿಂದ ಜಿಲ್ಲೆಗೆ ವಾಪಾಸಾಗಿರುವ ತಬ್ಲಿಗ್ ಜಮಾತ್‌ನ ಸದಸ್ಯರ ಮಾಹಿತಿ ಕಲೆ ಹಾಕುವಂತೆ ಮೌಖಿಕ ಸೂಚನೆ ನೀಡಿದ್ದರು.

ಆದರೆ, ಶೇಕ್‌ ಅಲಿ ಅವರು ತಬ್ಲಿಗ್ ಜಮಾತ್‌ನ ಸದಸ್ಯರ ಮಾಹಿತಿ ಕ್ರೂಢೀಕರಿಸದೆ ಕರ್ತವ್ಯ ಲೋಪ ಎಸಗಿದ್ದರು ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT