ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಉಳಿವಿಗೆ ಪರಿಸರ ರಕ್ಷಣೆ ಅವಶ್ಯ: ಎಂ.ಬಿ.ದೀಪಕ್ ಸುಮನ್

ಲಯನ್ಸ್ ಸಂಸ್ಥೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ
Last Updated 5 ಅಕ್ಟೋಬರ್ 2020, 3:48 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಸಮಾಜಸೇವೆಯ ಜತೆಗೆ ಸುತ್ತಲಿನ ‌ಪರಿಸರವನ್ನು ಸ್ವಚ್ಛವಾಗಿಸಿ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವಂತೆ ಗಿಡನೆಟ್ಟು, ನೀರುಣಿಸಿ ಪೋಷಿಸುವ ಕಾರ್ಯ ಬದುಕಿಗೆ ನೆಮ್ಮದಿ‌ ನೀಡುತ್ತದೆ’ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ‌ ಗರ್ವನರ್‌ ಎಂ.ಬಿ.ದೀಪಕ್ ಸುಮನ್ ತಿಳಿಸಿದರು.

ತಾಲ್ಲೂಕಿನ ಆರ್ಕುಂದ ಗ್ರಾಮದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು‌ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯ ಜೊತೆಯಲ್ಲಿ ರೈತರ ಜಮೀನು ಹಾಗೂ ಸರ್ಕಾರಿ ಭೂಮಿಯಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮುಂದಿನ ಪೀಳಿಗೆಯ ಉಳಿವಿಗೆ ಕೈ ಜೋಡಿಸಿದಂತಾಗುತ್ತದೆ. ಮನುಕುಲಕ್ಕೆ ಅತ್ಯವಶ್ಯವಾಗಿರುವ ಗಾಳಿ ಮತ್ತು ನೀರನ್ನು ಉಳಿಸಿ ಸ್ವಚ್ಛವಾಗಿಸುವ ಪ್ರಯತ್ನ ನಿಜಕ್ಕೂ ಉತ್ತಮವಾಗಿದೆ. ಪ್ರಾಣಿ‌ ಮತ್ತು ಸಸ್ಯ ಸಂಕುಲವನ್ನು ಅವನತಿಯ ಅಂಚಿನಿಂದ ಉಳಿಸಬೇಕಾದರೆ ಅಂತರ್ಜಲದ ಮಟ್ಟವನ್ನು ವೃದ್ಧಿಸಿ ಮಾಲಿನ್ಯವನ್ನು ತಪ್ಪಿಸಬೇಕಾಗಿದೆ. ಆಸಕ್ತಿಯಿಂದ ನೆಟ್ಟು ಪೋಷಿಸುವ ಪ್ರತಿಯೊಂದು ಗಿಡವೂ ಕೂಡ ಭವಿಷ್ಯದಲ್ಲಿ ಬೆಳೆದು ಹೆಮ್ಮರವಾಗಿ ನೂರಾರು ಪ್ರಾಣಿಗಳಿಗೆ ಆಸರೆಯಾದಾಗ ನಿಜವಾದ ಸಾರ್ಥಕತೆ ದೊರೆಯುತ್ತದೆ’ ಎಂದು‌ ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ಎನ್.ಪದ್ಮಶ್ರೀ ಮಾತನಾಡಿ, ‘ಸ್ಥಳೀಯನಾಗರಿಕರ ಜೊತೆಗೆ ವಿವಿಧ ಸಂಘ–ಸಂಸ್ಥೆಗಳು ‌ಸೇರಿ ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆದಲ್ಲಿ ಎಲ್ಲೆಡೆ ಉತ್ತಮವಾದ ಪರಿಸರವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ.ಪ್ರತಿ ವರ್ಷ ಮುಂಗಾರಿನ ಆರಂಭದಲ್ಲಿ ನೆಟ್ಟು ಪೋಷಿಸುವ ಗಿಡಗಳನ್ನು ಮುಂದಿನ 2 ವರ್ಷಗಳ‌ ಕಾಲ ನೀರುಣಿಸಿ ಜಾಗರೂಕತೆಯಿಂದ ಕಾಪಾಡಿದರೆ, ಅದೇ ಗಿಡಗಳು ಬೆಳೆದು ಜೀವನ ಪರ್ಯಂತ ಮನುಕುಲವನ್ನು ಸಂರಕ್ಷಿಸುತ್ತವೆ. ಇದಕ್ಕಾಗಿ ಇಲಾಖೆಯ ವತಿಯಿಂದ ಸದಾ ಸಹಕಾರ‌ ನೀಡಲು ಬದ್ಧವಾಗಿದ್ದೇವೆ’ ಎಂದು ಹೇಳಿದರು.

ತಾಲ್ಲೂಕು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಆರ್.ಜೆ.ಶ್ರೇಣಿಕ್ ಮಾತನಾಡಿ, ‘ವಿವಿಧ ಸಮಾಜಮುಖಿ‌ ಕಾರ್ಯಗಳ ಜತೆಗೆ ಈ ಬಾರಿ ಪರಿಸರ ಸಂರಕ್ಷಣೆಗಾಗಿ ಕೈಗೊಂಡ ಕಾರ್ಯಕ್ಕೆ ವಿವಿಧ ವಲಯಗಳ ಪದಾಧಿಕಾರಿಗಳು ನೀಡಿದ ಸಹಕಾರ ಶ್ಲಾಘನೀಯ’ ಎಂದು ಹೇಳಿದರು.

ಇದೇ ವೇಳೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ಎನ್.ಪದ್ಮಶ್ರೀ ಹಾಗೂ ಗ್ರಾ.ಪಂ ಆಡಳಿತಾಧಿಕಾರಿ ಮುರಳೀಧರ್ ರವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ರಾಜಶೇಖರಯ್ಯ, ಮನೋಹರನ್ ನಂಬಿಯಾರ್, ಪ್ರಭುಸ್ವಾಮಿ, ಶ್ರೀನಿವಾಸ್, ಜಿ.ಎನ್.ಸೂರಜ್, ಶ್ರೀಧರ್, ಜಗನ್ನಾಥ್ ರೆಡ್ಡಿ, ಇ.ಎಸ್.ಸತೀಶ್ ಕುಮಾರ್, ವಿ.ರವೀಂದ್ರನಾಥ್, ವೈ.ಎನ್.ಅಂಬಿಕಾ, ಲಕ್ಷ್ಮಿ, ಸಂಕೇತ್ ಶ್ರೀರಾಮ್, ನರಸಿಂಹಮೂರ್ತಿ, ರವಿಶಂಕರ್, ಡಿ.ಅಶ್ವತ್ಥರೆಡ್ಡಿ, ಪ್ರೊ.ಕೆ.ರಾಮಾಂಜನೇಯಲು, ಮುಖಂಡರಾದ ಕೆ.ಆರ್.ಸಪ್ತಗಿರಿ, ಎಸ್.ವಿ.ಕೃಷ್ಣಕುಮಾರಿ, ಶೈಲಜಾ, ಶಾಂತಿ‌ಸೂರಜ್, ಆನಂದ್, ದೇವರಾಜ್, ರವಿಕುಮಾರ್, ಪದ್ಮರಾಜ್, ಮುರಳೀಧರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT