ಭಾನುವಾರ, ಆಗಸ್ಟ್ 1, 2021
22 °C
ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯಕ್ಕೆ ಸ್ಥಳಾಂತರಿಸಿ ಚಿಕಿತ್ಸೆಗೆ ಕ್ರಮ

ಗೌರಿಬಿದನೂರಿನಲ್ಲಿ 15 ಕೊರೊನಾ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನಲ್ಲಿ ಬುಧವಾರ ಕೋವಿಡ್– 19 ಹೊಸ 15 ಪ್ರಕರಣಗಳು‌ ದೃಢಪಟ್ಟಿದೆ.
ಇತ್ತೀಚೆಗೆ ತಾಲ್ಲೂಕಿನ ‌ವಿವಿಧೆಡೆಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 107 ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಫಲಿತಾಂಶವು ಬುಧವಾರ ಹೊರಬಿದ್ದಿದ್ದು, ಇದಕ್ಕೆ ಸಂಬಂಧಿಸಿದಂತೆ ಒಟ್ಟು 13 ಮಂದಿ ಹಾಗೂ ಹೊಸ ಸಂಪರ್ಕ ಪಡೆದ ಇಬ್ಬರು ಸೇರಿದಂತೆ ಒಟ್ಟು 15 ಮಂದಿಗೆ ಸೋಂಕು ದೃಢಪಟ್ಟಿದೆ.

ಇದರಲ್ಲಿ ಗೌರಿಬಿದನೂರು ನಗರದ 13ನೇ ವಾರ್ಡಿನಲ್ಲಿ ಹೊಸ ಸಂಪರ್ಕ ಪಡೆದ 79 ವರ್ಷದ ವೃದ್ಧ ಹಾಗೂ 40 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ಸೋಂಕಿತರಾಗಿದ್ದಾರೆ. ಉಳಿದಂತೆ ಪ್ರಾಥಮಿಕ ಸಂಪರ್ಕದಿಂದ ನಕ್ಕಲಹಳ್ಳಿಯಲ್ಲಿ 1, ಅಲೀಪುರದಲ್ಲಿ 5, ಚಿಕ್ಕಹೊಸಹಳ್ಳಿ ಯಲ್ಲಿ 6, ಕಡಬೂರಿನಲ್ಲಿ 4 ವರ್ಷದ ಮಗು ಸೇರಿದಂತೆ ಒಟ್ಟು 13 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಬುಧವಾರ ಒಂದೇ ದಿನ ತಾಲ್ಲೂಕಿನಲ್ಲಿ 15 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸೋಂಕಿತರ ಬಗ್ಗೆ ಮಾಹಿತಿ‌ ಲಭ್ಯವಾದ ಕೂಡಲೇ ನಗರಸಭೆ ಅಧಿಕಾರಿಗಳು ನಗರದ 13ನೇ ವಾರ್ಡ್‌ನ ವಿವಿ ಪುರಂನಲ್ಲಿ ಸೋಂಕಿತ ವ್ಯಕ್ತಿಗಳ ಮನೆಯ‌ ಸುತ್ತಲೂ ಸೀಲ್‌ಡೌನ್ ಮಾಡಿದ್ದಾರೆ.

ಸೋಂಕಿತ 15 ಮಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಇವರನ್ನು ನಗರದ ‌ಹೊರವಲಯದಲ್ಲಿ ಕೋವಿಡ್ ಕೇರ್ ಕೇಂದ್ರವನ್ನಾಗಿ ಗುರುತಿಸಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯಕ್ಕೆ ಸ್ಥಳಾಂತರಿಸಿ  ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.