ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಿಂದ ಬೆದರಿಕೆ: ಜೆಡಿಎಸ್ ಆಕ್ರೋಶ

Published 21 ಜನವರಿ 2024, 4:30 IST
Last Updated 21 ಜನವರಿ 2024, 4:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರನ್ನು ಪ್ರಶ್ನಿಸಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಅಖಿಲ್ ರೆಡ್ಡಿ ಅವರಿಗೆ ಶಾಸಕರ ಬೆಂಬಲಿಗರು ಬೆದರಿಕೆ ಹಾಕಿರುವುದಕ್ಕೆ ಜೆಡಿಎಸ್ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪಕ್ಷವು 'ಎಕ್ಸ್'ನಲ್ಲಿ, ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿ ರೌಡಿಗಳಂತೆ ವರ್ತಿಸಿ ನಮ್ಮ ಕಾರ್ಯಕರ್ತರ ಮೇಲೆ ಧಮ್ಕಿ ಹಾಕಿ, ಜೀವ ಬೆದರಿಕೆ ಒಡ್ಡುತ್ತಿರುವ ಘಟನೆಗಳು ಗಮನಕ್ಕೆ ಬಂದಿವೆ. ಚಿಕ್ಕಬಳ್ಳಾಪುರ ಕ್ಷೇತ್ರ ಜನರ ಸ್ವತ್ತೇ ಹೊರತು ಶಾಸಕರಾದ ಪ್ರದೀಪ್ ಈಶ್ವರ್ @PNimmondige ಅಥವಾ @INCKarnataka ಪಕ್ಷದ ಜಹಗೀರಲ್ಲ. ಈ ಅಂಶವನ್ನು ಕಾಂಗ್ರೆಸ್ ಗೂಂಡಾಗಳು ಅರ್ಥ ಮಾಡಿಕೊಂಡರೆ ಒಳಿತು.

ಹಿರಿಯ ಸಹಕಾರಿ ಧುರೀಣರು, ಮಾಜಿ ಶಾಸಕರು ಹಾಗೂ ನಮ್ಮ ಗೌರವಾನ್ವಿತ ನಾಯಕರು, ಜನಾನುರಾಗಿಗಳು ಆಗಿದ್ದ ಕೆ.ಬಿ.ಪಿಳ್ಳಪ್ಪನವರ ವಿಗ್ರಹ ಸ್ಥಾಪನೆ ಮಾಡುವ ಬಗ್ಗೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಅವರೇ ನೀಡಿದ್ದ ಭರವಸೆಯನ್ನು ಆರು ತಿಂಗಳಾದರೂ ಈಡೇರಿಸದ ಬಗ್ಗೆ ನಮ್ಮ ಕಾರ್ಯಕರ್ತ ಅಖಿಲ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ. ಪ್ರಶ್ನಿಸುವುದೇ ಅಪರಾಧವೇ? ಶಾಸಕರು ಪ್ರಶ್ನಾತೀತರೇ? ಧಮ್ಕಿ, ಬೆದರಿಕೆ ಹಾಕಿರುವ ವರ್ತನೆ ಖಂಡನೀಯ.

ಕೀಳು ಭಾಷೆ, ವೈಯಕ್ತಿಕ ಚಾರಿತ್ರ್ಯಹರಣ ಸಹಿಸುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಜಾತಿ ಹೆಸರು ತಂದು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿರುವ ಈ ಗೂಂಡಾಗಳನ್ನು ಪೊಲೀಸರು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇವೆ. ಪಕ್ಷದ ಕಾರ್ಯಕರ್ತರು ಇಂತಹ ರೌಡಿ, ಗೂಂಡಾಗಳಿಗೆ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ ಇಡೀ ಪಕ್ಷವಿದೆ ಎಂದು ಜೆಡಿಎಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT