ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಅಂತಿಮ ಕಣದಲ್ಲಿ 29 ಅಭ್ಯರ್ಥಿಗಳು

ಮೂವರು ಅಭ್ಯರ್ಥಿಗಳಿಂದ ಉಮೇದುವಾರಿಕೆ ವಾಪಸ್
Published 8 ಏಪ್ರಿಲ್ 2024, 13:43 IST
Last Updated 8 ಏಪ್ರಿಲ್ 2024, 13:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ  ನಾಮಪತ್ರಗಳನ್ನು ವಾಪಸ್ ಪಡೆಯಲು ಸೋಮವಾರ ಅಂತಿಮ ದಿನವಾಗಿದ್ದು ಒಟ್ಟು ಮೂವರು ಅಭ್ಯರ್ಥಿಗಳನ್ನು ನಾಮಪತ್ರಗಳನ್ನು ವಾಪಸ್ ಪಡೆದರು.  ಅಂತಿಮ ಕಣದಲ್ಲಿ 29 ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ.ವಿ.ಬಾಲಮುರಳಿಕೃಷ್ಣ ಗೌಡ, ರಮೇಶ್, ರಾಮನಾಯ್ಕ್ ಅವರು ಉಮೇದುವಾರಿಕೆ ಹಿಂಪಡೆದಿದ್ದಾರೆ.

ಕಣದಲ್ಲಿ ಉಳಿದವರು: ಮಹದೇವ್ ಪಿ. (ಬಿಎಸ್‌ಪಿ), ಮುನಿವೆಂಕಟಪ್ಪ ಎಂ.ಪಿ. (ಸಿಪಿಎಂ), ಎಂ.ಎಸ್. ರಕ್ಷಾ ರಾಮಯ್ಯ (ಕಾಂಗ್ರೆಸ್), ಡಾ. ಕೆ.ಸುಧಾಕರ್ (ಬಿಜೆಪಿ), ಕಲಾವತಿ ಎನ್. (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ನಾಗೇಶ್ ಎಸ್. (ದಿಗ್ವಿಜಯ ಭಾರತ ಪಾರ್ಟಿ), ಟಿ.ಆರ್. ನಾರಾಯಣರಾವ್ (ಇಂಡಿಯನ್ ಲೇಬರ್ ಪಾರ್ಟಿ–ಅಂಬೇಡ್ಕರ್ ಫುಲೆ), ವೆಂಕಟೇಶ ಮೂರ್ತಿ.ವಿ (ಉತ್ತಮ ಪ್ರಜಾಕೀಯ ಪಾರ್ಟಿ), ಜಿ.ಸುಬ್ರಮಣಿ ಶೆಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ) ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಜಿ.ಎನ್. ಕೋದಂಡರೆಡ್ಡಿ, ಚಂದ್ರಶೇಖರ ಎಚ್.ಸಿ, ಡಿ.ಚಿನ್ನಪ್ಪ, ದೇವರಾಜ್ ಕೊರೋನ ವಾರಿಯರ್, ವಿ.ಎನ್. ನರಸಿಂಹಮೂರ್ತಿ ವಡಿಗೆರೆ, ನಸರುಲ್ಲಾ, ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ, ಮೋಹಿತ್ ನರಸಿಂಹಮೂರ್ತಿ, ಜಿ.ಎನ್. ರವಿ, ರಾಜಣ್ಣ, ರಾಜರೆಡ್ಡಿ, ಎಂ.ಆರ್. ರಂಗನಾಥ, ಸಿ.ವಿ. ಲೋಕೇಶ್ ಗೌಡ, ವಲಸಪಲ್ಲಿ ಉತ್ತಪ್ಪ, ಟಿ.ವೆಂಕಟಶಿವುಡು, ಕೆ.ವೆಂಕಟೇಶ್, ಜಿ.ಎನ್. ವೆಂಕಟೇಶ್, ಸುಧಾಕರ್ ಎನ್., ಡಿ.ಸುಧಾಕರ, ಸಂದೇಶ್ ಜಿ. ಅಂತಿಮ ಸ್ಪರ್ಧೆಯಲ್ಲಿ ಉಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT