ಬಾಗೇಪಲ್ಲಿ: ಪಟ್ಟಣದ ಪಿಎಂಶ್ರೀ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ‘ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳ ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ 22 ಕ್ಲಸ್ಟರ್ಗಳ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸಾಂಸ್ಕೃತಿಕ, ಕರಕುಶಲ ಚಟುವಟಿಕೆಗಳಲ್ಲಿ ಭಾಗಿಯಾದರು.

3 ಹಂತಗಳಲ್ಲಿ ಪ್ರಾಥಮಿಕ ವಿಭಾಗ (1ರಿಂದ 4ನೇ ತರಗತಿ) 13 ಸ್ಪರ್ಧೆಗಳಲ್ಲಿ 264 ವಿದ್ಯಾರ್ಥಿಗಳು, ಹಿರಿಯರ ವಿಭಾಗದ (5ನೇ ತರಗತಿಯಿಂದ 7ನೇ ತರಗತಿ) 16 ಸ್ಪರ್ಧೆಗಳಲ್ಲಿ 356 ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ವಿಭಾಗದಲ್ಲಿ (8ರಿಂದ 10 ನೇ ತರಗತಿ) 21 ಸ್ಪರ್ಧೆಗಳಲ್ಲಿ 415 ಮಕ್ಕಳು ಭಾಗವಹಿಸಿದ್ದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿದ್ದರು. ಕೋಲಾಟ, ಜಾನಪದ, ರಂಗಗೀತೆ, ಗೀಗಿಪದ, ಭಾವಗೀತೆ, ಛದ್ಮವೇಷ, ಕಥೆ ಹೇಳುವುದು, ಜಾನಪದ ನೃತ್ಯ, ಮಿಮಿಕ್ರಿ, ರಂಗೋಲಿ, ರಸಪ್ರಶ್ನೆ, ರಂಗಪ್ರದರ್ಶನ, ಪದ್ಯ ಹೇಳುವುದು, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮನ್ನು ತೊಡಗಿಸಿಕೊಂಡರು. ಜೇಡಿಮಣ್ಣಿನಲ್ಲಿ ಮೊಸಳೆ, ಆಮೆ, ಪರಿಸರದ ಬಗೆ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚನೆ ಮಾಡಿದರು. ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳನ್ನು ಸಿದ್ಧಗೊಳಿಸಿದರು.

ಮಕ್ಕಳು ಹಾಡು ಹೇಳಿಕೊಂಡು ನೃತ್ಯ ಮಾಡಿದರು. ಉರ್ದು ಶಾಲೆ ಮಕ್ಕಳು ಪ್ರದರ್ಶಿಸಿದ ಖವ್ವಾಲಿ, ಜಾನಪದ, ಗೀತೆಗಳ ನೃತ್ಯಗಳು ಜನಮನ ಸೆಳೆಯಿತು. ಪರಿಸರ, ಮರದಿಂದ ಆಗುವ ಪ್ರಯೋಜಗಳು, ಸಂಚಾರ ನಿಯಮಗಳು, ಆಮೆ, ಕಾಡುಮನುಷ್ಯ, ರಥದಲ್ಲಿ ಕೃಷ್ಣನ ವೇಷ ಸೇರಿದಂತೆ ಮಕ್ಕಳ ವಿವಿಧ ವೇಷಭೂಷಣಗಳು ನೋಡುಗರನ್ನು ಆಕರ್ಷಿಸಿದವು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಮಾತನಾಡಿ, 2012ರಿಂದ ಕ್ಲಸ್ಟರ್ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿನ ಕಲೆ, ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ ಆಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳು ಶಿಕ್ಷಣದ ಜೊತೆಗೆ ಕರಕುಶಲ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಆರ್.ವೆಂಕಟರಾಮಪ್ಪ, ಆರ್. ಹನುಮಂತರೆಡ್ಡಿ, ರಂಗಾರೆಡ್ಡಿ, ನಾಗರಾಜ್, ವೆಂಕಟರವಣಪ್ಪ, ವೆಂಕಟರಾಯಪ್ಪ, ಎಂ.ಎನ್. ಮಂಜುನಾಥ್, ನಸರುದ್ದೀನ್, ಎನ್. ಶಿವಪ್ಪ, ಮಂಜುನಾಥ್, ಬಾವಾಜಾನ್, ಚಂದ್ರಶೇಖರ್, ಓಬೇದುಲ್ಲಾ, ರಂಗನಾಥ್, ಸುಜಾತ, ಈಶ್ವರಪ್ಪ, ಶಿವಯ್ಯ, ಕದಿರಪ್ಪ, ವರುಣ್, ಪ್ರಭಾವತಮ್ಮ, ಪ್ರಮೀಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.