ಗುಡಿಬಂಡೆ: ಇಲ್ಲಿನ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಿ.ಎಂ.ಅನಿಲ್ ಕುಮಾರ್ (42) ಬುಧವಾರ ನಡುರಾತ್ರಿ ಪಟ್ಟಣದ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ದಂಪತಿ ವಕೀಲರಾಗಿದ್ದು ಪತ್ನಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಅನಿಲ್ ಗುಡಿಬಂಡೆಯಲ್ಲಿ ವಕೀಲರಾಗಿದ್ದರು. ಈ ಹಿಂದೆ ಗುಡಿಬಂಡೆ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
ಬುಧವಾರ ನಡುರಾತ್ರಿಯವರೆಗೂ ತಮ್ಮ ಮನೆಯಲ್ಲಿದ್ದ ಸ್ನೇಹಿತರ ಜೊತೆಯಲ್ಲಿ ಮಾತನಾಡುತ್ತ ಕುಳಿತಿದ್ದಾಗ ಮೊಬೈಲ್ ಕರೆ ಬಂದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತ ಅವರು ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ.
ತಾವು ಯಾರಿಗೆ ಹಣ ಕೊಡಬೇಕು ಮತ್ತು ತಮಗೆ ಯಾರು ಹಣ ಕೊಡಬೇಕು ಎನ್ನುವುದನ್ನು ಡೆತ್‌ನೋಟ್‌ನಲ್ಲಿ ಅನಿಲ್ ಬರೆದಿಟ್ಟಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.