ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ

Last Updated 19 ಡಿಸೆಂಬರ್ 2020, 3:52 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಶಿಕ್ಷಣವು ಬೆಳೆಯುವ ಮಕ್ಕಳಿಗೆ ಅತ್ಯಮೂಲ್ಯವಾದ ಆಸ್ತಿ. ಪೋಷಕರು ಮತ್ತು ಶಿಕ್ಷಕರು ಕಾಳಜಿ ವಹಿಸಿ ಮೌಲ್ಯಾಧಾರಿತ ಶಿಕ್ಷಣವನ್ನು ಕೊಡಿಸಿದಲ್ಲಿ ಸಮಾಜದಲ್ಲಿ ಅವರನ್ನು ಸತ್ಪ್ರಜೆಗಳಾಗಿ ಕಾಣಲು ಸಾಧ್ಯ’ ಎಂದು ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯಿತ್ರಿ ಬಸವರಾಜು ತಿಳಿಸಿದರು.

ನಗರದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ನಗರಸಭೆ ಮತ್ತು ಕ್ಷೇತ್ರ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸರ್ಕಾರವು ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸುತ್ತಿದ್ದು, ಇದು ಬಹಳ ಮಹತ್ವವಾದ ಕಾರ್ಯಕ್ರಮ. ಮಾರ್ಚ್ ತಿಂಗಳಿನಿಂದ ಕೋವಿಡ್19 ಪ್ರಭಾವದಿಂದ ಅನೇಕ ಕ್ಷೇತ್ರಗಳ ಅಭಿವೃದ್ಧಿ ಕ್ಷೀಣಿಸಿದ್ದು, ಇದಕ್ಕೆ ಶಿಕ್ಷಣ ಕ್ಷೇತ್ರ ಹೊರತಾಗಿಲ್ಲ. ಇದರಿಂದ ಇದುವರೆಗೂ ಶಾಲೆಗಳು ಪ್ರಾರಂಭವಾಗಿಲ್ಲ ಜೊತೆಗೆ ಮಕ್ಕಳು ಶಾಲೆಯಿಂದ ದೂರವಾಗಿದ್ದು ಮಕ್ಕಳ ಸಮೀಕ್ಷೆ ನಡೆಸಿ ಶಾಲೆಗೆ ತರುವ ಕೆಲಸ ಮಾಡಲು ಶಿಕ್ಷಕರು ಮುಂದಾಗಬೇಕು. ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿರುವ ಪೋಷಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ಪೋಷಕರು ಮಗುವಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಉಜ್ವಲ ಭವಿಷ್ಯ ಹೊಂದಲು ಸಹಕಾರಿಯಾಗಲಿದೆ. ಈ ಸಮೀಕ್ಷೆಗೆ ನಗರಸಭೆ ಕಾರ್ಯಾಲಯ ಅಧಿಕಾರಿಗಳ ಸಹಕಾರವಿರುತ್ತದೆ’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ ಮಾತನಾಡಿ, ‘ದೇಶದ ಪ್ರಗತಿಗೆ ಶಿಕ್ಷಣ ಮಾನದಂಡವಾಗಿದ್ದು, ಸರ್ಕಾರವು ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣದ ಕೊರತೆಯಿದ್ದು, ಇದಕ್ಕಾಗಿ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಜೂನ್ ತಿಂಗಳ ಮಾಹೆಯಲ್ಲಿ ಮುಖ್ಯ ಶಿಕ್ಷಕರು ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದಾಗಿ ಮಾತ್ರ ಶಾಲೆ ಬಿಟ್ಟ ಮಕ್ಕಳ ಅಂಕಿ ಅಂಶ ತಿಳಿಯುತ್ತದೆ. ಶಾಲೆ ಬಿಟ್ಟ ಮಕ್ಕಳ ಮಾಹಿತಿ ಕಂಡು
ಹಿಡಿದ ನಂತರ ಅವರಿಗೆ ಮೂರು ತಿಂಗಳ ವಿಶೇಷ ತರಗತಿಗಳು ನಡೆಸಬೇಕು’ ಎಂದರು.

ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ವಿ.ರಮೇಶ್, ಮಂಜುಳಾ, ಪದ್ಮಾವತಿ, ನಗರಸಭೆ ಅಧಿಕಾರಿಗಳಾದ ಸುರೇಶ್, ಸಂತೋಷ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT