ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಮೇಲ್ಸೇತುವೆ: ಸಂಚಾರ ಸ್ಥಗಿತ

ಬಾಗೇಪಲ್ಲಿ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಲಖಾನೆ ಸಂಪರ್ಕ ಸೇತುವೆ
Last Updated 11 ಜುಲೈ 2020, 6:22 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಲಖಾನೆ ಹಾಗೂ ದೇಶಮಾರತಾಂಡಗೆ ಸಂಪರ್ಕಿಸುವ ರಸ್ತೆಯ ಮೇಲುಸೇತುವೆ ಕೆಳಭಾಗದಲ್ಲಿ ನಿರ್ಮಿಸಿರುವ ಕಲ್ಲು, ಸಿಮೆಂಟ್‌ನ ಪದರಗಳು ಕುಸಿದಿವೆ. ಇದರಿಂದ ಗ್ರಾಮಸ್ಥರಿಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ತರಕಾರಿ ಸಾಗಿಸುವ ವಾಹನಗಳ ಸಂಚಾರ ಇಲ್ಲದಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿಯ ಕಂಬಾಲಪಲ್ಲಿ ಕ್ರಾಸ್‌ನ ಮುಖ್ಯರಸ್ತೆಯಿಂದ ಎಡಭಾಗಕ್ಕೆ ತಿರುಗಿದರೆ, ಮದ್ದಲಖಾನೆ, ದೇಶಮಾರತಾಂಡಾ ಇದೆ. ಮದ್ದಲ ಖಾನೆ ಗ್ರಾಮದಲ್ಲಿ 600 ಮಂದಿ, ದೇಶಮಾರತಾಂಡದಲ್ಲಿ 300 ಮಂದಿ ನೆಲೆಸಿದ್ದಾರೆ. 2 ಗ್ರಾಮಗಳಿಗೆ ಸಂಚರಿಸಲು ಒಂದೇ ರಸ್ತೆ ಇದೆ. ಕಂಬಾಲಪಲ್ಲಿ ಗ್ರಾಮದಿಂದ ಮದ್ದಲಖಾನೆ ಗ್ರಾಮಕ್ಕೆ ಸಂಚರಿಸುವ ಮಾರ್ಗದ ರಸ್ತೆಯ ಮಧ್ಯದಲ್ಲಿ ಮೇಲ್ಸೇಸೇತುವೆ ಇದೆ.

ಇದೇ ಮೇಲು ಸೇತುವೆಯು ಮೇಲ್ಪದರ ಗುಣಮಟ್ಟದಿಂದ ಇದೆ. ಸೇತುವೆ ಕೆಳಭಾಗದಲ್ಲಿ ಇರುವ ಕಲ್ಲು, ಸಿಮೆಂಟ್‌ಗಳಿಂದ ನಿರ್ಮಿಸಲಾಗಿದೆ. ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇದೀಗ ಸೇತುವೆಯ ಕಲ್ಲು ಹಾಗೂ ಸಿಮೆಂಟ್ ಪದರಗಳು ಉದುರಿವೆ. ತಾಲ್ಲೂಕಿನ ಮಿಟ್ಟೇಮರಿ, ಮುತ್ತಿನಪಲ್ಲಿ, ನಲ್ಲಮಲ್ಲೇಪಲ್ಲಿ, ಮಲ್ಲಿಗುರ್ಕಿ ಗ್ರಾಮಗಳ ಕೆರೆ, ಕುಂಟೆಗಳಿಂದ ಹರಿದು ಬರುವ ನೀರು ಇದೇ ಸೇತುವೆಯ ಮೂಲಕ ಯಲ್ಲಂಪಲ್ಲಿ ಗ್ರಾಮದ ಕೆರೆಗೆ ಹರಿಯುತ್ತದೆ.

ಸೇತುವೆಯ ಕೆಳಭಾಗದಲ್ಲಿ ಕುಸಿತ ಕಂಡಿರುವುದರಿಂದ ರೈತರು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ. ಮೇಲ್ಸೇತುವೆ ಮೇಲೆ ಗ್ರಾಮಸ್ಥರು ಮರದ ದಿಮ್ಮಿಗಳನ್ನು ಹಾಕಿದ್ದಾರೆ. ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತಲಕ್ಷ್ಮಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಶಂಕರಾಚಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದಿಂದ ಮದ್ದಲಖಾನೆ, ದೇಶಮಾರತಾಂಡ ಸಂಪರ್ಕಿಸುವ ರಸ್ತೆಯಲ್ಲಿ ಮೇಲ್ಸೇತುವೆ ಕೆಳಭಾಗ ಕುಸಿತವಾಗಿದೆ. ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಗಮನ ಹರಿಸಿ, ಮೇಲ್ಸೇತುವೆದುರಸ್ತಿ ಮಾಡಿಸಬೇಕು’ ಎಂದು ಮುಖಂಡ ಪಿ.ಮಂಜುನಾಥರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT