ಮಂಗಳವಾರ, ಜನವರಿ 26, 2021
16 °C

ಹೊಸ ವರ್ಷ ಆಚರಣೆಗೆ 50 ಕೆ.ಜಿ ತೂಕದ ಕೇಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ಮುಂಭಾಗದಲ್ಲಿರುವ ಕೇಕ್ ಪ್ಯಾರಡೈಸ್ ಬೇಕರಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ವಿಶೇಷವಾಗಿ ತಯಾರಿಸಿರುವ ಕೇಕ್ ಸಾರ್ವಜನಿಕರ ಗಮನಸೆಳೆಯುತ್ತಿದೆ.

ತಾಲ್ಲೂಕಿನ ಸಮಸ್ತ ಜನರು ಹೊಸ ವರ್ಷದಲ್ಲಿ ಸಿಹಿಯಾದ ಜೀವನ ನಡೆಸಲು ಪ್ರೇರಣೆಯಾಗಬೇಕು ಎಂದು ಬೇಕರಿ ಮಾಲೀಕ ನಂದೀಶ್ 50 ಕೆ.ಜಿ ತೂಕದ ಆಕರ್ಷಕವಾದ ಕೇಕ್ ತಯಾರಿಸಿದ್ದಾರೆ.

ವಿವಿಧ ಬಣ್ಣಗಳಿಂದ ಕಲರ್ ಫುಲ್ ಆಗಿರುವ ಕೇಕ್ ನೋಡಲು ಜನರು ಬೇಕರಿಗೆ ಭೇಟಿ ನೀಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ವಿಶೇಷ ಕೇಕ್ ನಗರದ ಜನತೆಯ ಚರ್ಚೆಗೆ ಗ್ರಾಸವಾಗಿತ್ತು.

2020ರಲ್ಲಿ ಕೋವಿಡ್-19 ನಿಂದ ಇಡೀ ದೇಶವೇ ತಲ್ಲಣಗೊಂಡಿತ್ತು. ಎಲ್ಲ ಕ್ಷೇತ್ರ, ವರ್ಗದ ಜನರು ನಾನಾ ರೀತಿಯಲ್ಲಿ ತೊಂದರೆ ಅನುಭವಿಸಿದರು. ಬಹುತೇಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದರು. ಜನರು ಆರ್ಥಿಕವಾಗಿ, ಮಾನಸಿಕವಾಗಿ ಕುಸಿದಿದ್ದರು. 2021ನೇ ವರ್ಷಕ್ಕೆ ಕೊರೊನಾ ವೈರಸ್‌‌ನಿಂದ ಮುಕ್ತಿ ದೊರೆಯಲಿ. ಸಮಸ್ತ ಜನತೆಗೂ ಸುಖ, ಶಾಂತಿ, ನೆಮ್ಮದಿ ನೀಡಲಿ. ಸಕಲ ಜೀವರಾಶಿಗಳಿಗೂ ರಕ್ಷಣೆಯನ್ನು ಕೋರಿ ಶುಭ ಹಾರೈಸುವ ಸಲುವಾಗಿ ಕೇಕ್ ತಯಾರಿಸಲಾಗಿದೆ ಎಂದು ನಂದೀಶ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.