ಸೋಮವಾರ, ಅಕ್ಟೋಬರ್ 14, 2019
28 °C

ಅ.8 ರಂದು ‘ವಿಜಯ ದಶಮಿ ಉತ್ಸವ’ ಮೆರವಣಿಗೆ

Published:
Updated:

ಚಿಕ್ಕಬಳ್ಳಾಪುರ: ‘ವಿಜಯ ದಶಮಿ ಹಬ್ಬದ ಪ್ರಯುಕ್ತ ನಗರದಲ್ಲಿ ಅ.8ರಂದು ಸಾಮೂಹಿಕ ಸದ್ಭಾವನಾ ವಿಜಯ ದಶಮಿ ಉತ್ಸವ ಸಮಿತಿ ವತಿಯಿಂದ 6ನೇ ವರ್ಷದ ‘ವಿಜಯ ದಶಮಿ ಉತ್ಸವ’ದ ಮೆರವಣಿಗೆ ಆಯೋಜಿಸಲಾಗಿದೆ’ ಎಂದು ಸಮಿತಿ ಕಾರ್ಯದರ್ಶಿ ಡಾ.ಬಿ.ವಿ.ಮಂಜುನಾಥ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯ ದಶಮಿಯಂದು ಸಂಜೆ 4.30ಕ್ಕೆ ನಗರದ ಬಿ.ಬಿ. ರಸ್ತೆಯಲ್ಲಿರುವ ಡಿಡಿಪಿಐ ಕಚೇರಿ ಆವರಣದಿಂದ ವಾಪಸಂದ್ರ ರಂಗನಾಥಸ್ವಾಮಿ ದೇವಾಲಯದವರೆಗೂ ಭಾರತ ಮಾತೆ, ಸ್ವಾಂತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಮೆರವಣೆಗೆ ನಡೆಯಲಿದೆ’ ಎಂದು ಹೇಳಿದರು.

‘ಮೆರವಣಿಗೆಗೂ ಮುನ್ನ ಮಧ್ಯಾಹ್ನ 3ಕ್ಕೆ ಗೋಮಾತೆ ಪೂಜೆ ನೆರವೇರಿಸಲಾಗುತ್ತದೆ. ಹೃಷಿಕೇಶ ಆಶ್ರಮದ ನರೋತ್ತಮ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಬಿ.ಬಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮನಗುಡಿ ರಸ್ತೆ, ಶಿಡ್ಲಘಟ್ಟ ಸರ್ಕಲ್ ಮಾರ್ಗವಾಗಿ ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯ ತಲುಪಲಿದೆ’ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಉಪೇಂದ್ರ, ಸಂಯೋಜಕರಾದ ಸುಧಾಕರ್, ಭಾನು, ಶಿವಕುಮಾರ್, ಪ್ರಜ್ವಲ್, ಸೂರ್ಯವಂಶಿ, ಕಾರ್ತಿಕ್, ಮನೋಜ್ ಹಾಜರಿದ್ದರು.

Post Comments (+)