ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 120 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದು ಸದ್ವಿನಿಯೋಗ ಆಗಬೇಕಾದರೆ ಮಧ್ಯವರ್ತಿಗಳ ತಡೆಗೆ ಕಠಿಣ ಕ್ರಮ ಅಗತ್ಯ ಎಂದು ನಿಗಮದ ಅಧ್ಯಕ್ಷ ಎನ್.ಬಿ.ಅಬುಬಕ್ಕರ್ ತಿಳಿಸಿದರು.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ನಿಗಮದ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶ್ರಮ ಶಕ್ತಿ ಮತ್ತು ಮೈಕ್ರೋ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ಗಳನ್ನು ವಿತರಿಸಿ ಮಾತನಾಡಿದರು.

‘ಅಲ್ಪಸಂಖ್ಯಾತರ ಕಲ್ಯಾಣವು ನಿಗಮದ ಅಭಿವೃದ್ಧಿಗೆ ಬದ್ಧವಾಗಿದ್ದು, ಹಂತಹಂತವಾಗಿ ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸ್ವಾವಲಂಬನಾ ಸಾಲ, ಅರಿವು ಸಾಲ, ಶ್ರಮ ಶಕ್ತಿ ಸಾಲ, ಮೈಕ್ರೋ ಸಾಲ, ಗಂಗಾ ಕಲ್ಯಾಣ, ಹೊಲಿಗೆ ತರಬೇತಿ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ನೆರವು ನೀಡಲಾಗಿದೆ. ಒಟ್ಟು 2834 ಫಲಾನುಭವಿಗಳಿಗೆ 324 ಲಕ್ಷ ರೂಪಾಯಿ ಸಾಲ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ಗಮನಕ್ಕೆ ಬಂದಿದ್ದು, ಇದರ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದರ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ನಿಗಮದ ಅಧ್ಯಕ್ಷರಿಂದಲೇ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುತ್ತಿದೆ. ಮಧ್ಯವರ್ತಿಗಳ ಪ್ರವೇಶ ನಿಯಂತ್ರಿಸಲಾಗಿದೆ ಎಂದು ಅವರು ಹೇಳಿದರು.

ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 834 ರೇಷ್ಮೆ ಬಿಚ್ಚಾಣಿಕೆದಾರರು ಸಾಲ ಪಡೆದಿದ್ದು, ಅವರಿಂದ 2.37 ಕೋಟಿ ರೂಪಾಯಿ ಬಡ್ಡಿ ಬರಬೇಕಿದೆ. ಸಾಲವನ್ನು ಈ ತಿಂಗಳಾಂತ್ಯದಲ್ಲಿ ಪಾವತಿ ಮಾಡಿದ್ದಲ್ಲಿ, ಬಡ್ಡಿ ಮನ್ನಾ ಮಾಡಲಾಗುವುದು. ರೇಷ್ಮೆ ಬಿಚ್ಚಾಣಿಕೆದಾರರು ಶೀಘ್ರವೇ ಸಾಲ ಪಾವತಿಸಿದರೆ ಉಪಯುಕ್ತವಾಗುತ್ತದೆ ಎಂದು ಅಬುಬಕ್ಕರ್ ಹೇಳಿದರು.

ನಿಗಮದ ಎರಡೂವರೆ ವರ್ಷಗಳ ಅವಧಿಯಲ್ಲಿ ಒಟ್ಟು 95826 ಫಲಾನುಭವಿಗಳಿಗೆ 138.68 ಕೋಟಿ ರೂಗಳನ್ನು ಸಾಲ ನೀಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 13 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಕೃಷಿ ಭೂಮಿ ಖರೀದಿ ಯೋಜನೆಯಲ್ಲಿ 160 ಫಲಾನುಭವಿಗಳಿಗೆ 320 ಎಕರೆ ಕೃಷಿ ಭೂಮಿಗೆ 411 ಲಕ್ಷ ರೂಪಾಯಿ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು.

ಶ್ರಮ ಶಕ್ತಿ ಯೋಜನೆಯಡಿ 306 ಫಲಾನುಭವಿಗಳಿಗೆ 30.60 ಲಕ್ಷ ಮತ್ತು ಮೈಕ್ರೋ ಸಾಲ ಯೋಜನೆಯಡಿ 621 ಫಲಾನುಭವಿಗಳಿಗೆ 32.61 ಲಕ್ಷ ರೂಪಾಯಿ ಮೌಲ್ಯದ ಚೆಕ್ನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ನಿಗಮದ ಅಧ್ಯಕ್ಷ ಶಫೀವುಲ್ಲಾ, ವ್ಯವಸ್ಥಾಪಕ ನಿರ್ದೇಶಕ ಶಬೀರ್ ಅಹಮದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.