ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಾಪುರ ಎಂಬ ಪಕ್ಷಿಧಾಮ

Last Updated 16 ಫೆಬ್ರುವರಿ 2014, 9:37 IST
ಅಕ್ಷರ ಗಾತ್ರ

ಬಾಗೇಪಲ್ಲಿ ಬಯಲುಸೀಮೆ ಎಂಬ ಮಾತು ಜನಜನಿತ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲ ಮನ­ಮೋಹಕ ತಾಣಗಳು ಇಲ್ಲಿವೆ. ಅಂಥ ತಾಣಗಳಲ್ಲಿ ಬಾಗೇಪಲ್ಲಿ­ಯಿಂದ ಸುಮಾರು 12 ಕಿ.ಮೀ.ಗಳಷ್ಟು ದೂರವಿರುವ ವೀರಾ­ಪುರ ನಿರ್ದೇಶನ.  ಇದು ಒಂದರ್ಥದಲ್ಲಿ ಅಘೋಷಿತ ಪಕ್ಷಿಧಾಮ.

ವರ್ಷಪೂರ್ತಿ ಇಲ್ಲಿ ಪಕ್ಷಿಗಳ ದಟ್ಟಣೆ ಕಾಣದಿದ್ದರೂ ಪ್ರತಿ ವರ್ಷ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಪಕ್ಷಿಗಳ ಕಲರವ ಕೇಳಿ ಬರುತ್ತದೆ.  ಪ್ರದೇಶದ ಸೊಗಸಿನ ಅನುಭವ ಪಡೆಯಲು ಮೊದಲು ಸಂಗಾತಿ­ಗಳೊಂ­ದಿಗೆ ಬರುವ ಪಕ್ಷಿಗಳು ನಂತರ ಗುಂಪುಗುಂಪಾಗಿ ಬರುತ್ತವೆ. ಕೆಲ ದಿನಗಳ ಮಟ್ಟಿಗೆ ಇಡೀ ವೀರಾಪುರ ಪ್ರದೇಶವನ್ನೇ ತಮ್ಮ ಆವಾಸಸ್ಥಾನ ಮಾಡಿಕೊಳ್ಳುತ್ತವೆ.

ಪೇಂಟೆಡ್, ಸ್ಟಾಕ್ಸರ್್, ಸ್ಟೂನ್ ಬಲ್ಸ್, ಬಲ್ಸ್ ಪಕ್ಷಿಗಳು ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೈಬೇರಿಯಾ, ನೈಜಿ­ರಿಯಾ, ದಕ್ಷಿಣ ಆಫ್ರಿಕಾದಿಂದ  ಹೆಚ್ಚಿನ  ಸಂಖ್ಯೆಯಲ್ಲಿ ಬರುತ್ತವೆ. ಮರದ ರೆಂಬೆ, ಕೊಂಬೆ ಮತ್ತು ಪೊಟರೆ­ಗಳಲ್ಲಿ  ಗೂಡುಗಳನ್ನು ಕಟ್ಟಿಕೊಳ್ಳುವ ಪಕ್ಷಿಗಳು ಮೊಟ್ಟೆ­ಗಳನ್ನು  ಇಡುತ್ತವೆ ಎನ್ನುತ್ತಾರೆ ಪಕ್ಷಿತಜ್ಞರು.

   ಆಂಧ್ರಪ್ರದೇಶದ ಗಡಿಭಾಗ ಅನಂತಪುರ ಜಿಲ್ಲೆಯ  ಹಿಂದೂಪುರ ತಾಲ್ಲೂಕಿಗೂ ವೀರಾ­­ಪುರದ ಕೆಲವಷ್ಟು ಪ್ರದೇಶ ಸೇರು­ತ್ತದೆ. ಪ್ರದೇಶ ಎಷ್ಟೇ ದೂರವಾಗಿದ್ದರೂ ಪ್ರವಾಸಿಗರು ಪಕ್ಷಿಗಳನ್ನು ನೋಡಲೆಂದೇ ಇಲ್ಲಿ ಬರುತ್ತಾರೆ. ಛಾಯಾಗ್ರಾಹಕರ ದೊಡ್ಡ ದಂಡೆ ಇಲ್ಲಿ ನೆರೆದಿರುತ್ತದೆ. ಕೆರೆಗಳಲ್ಲಿ ಹನಿಹನಿಯಾಗಿ ನೀರು ಗುಟು­ಕರಿಸುವ ಮತ್ತು ಮೀನುಗಳನ್ನು ಹಿಡಿ­ಯುವ ಪಕ್ಷಿಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಾರೆ.

ವೀರಾಪುರ ಪ್ರದೇಶದ ಸಂರಕ್ಷಣೆಗೆ ಮತ್ತು ಪಕ್ಷಿಗಳ ಆರೈಕೆಗೆಂದೇ ವೀರಾಪುರ ವೆಲ್‌­ಫೇರ್ ಸೊಸೈಟಿ ಎಂಬ ಸಂಘವೊಂದನ್ನು ಹುಟ್ಟು ಹಾಕಿ­ದ್ದೇವೆ. ಪಕ್ಷಿಗಳ ಹಿತದೃಷ್ಟಿಯಿಂದ ಪ್ರದೇಶವನ್ನು ಯಥಾ­ರೀತಿ ನೈಸರ್ಗಿಕವಾಗಿ ಕಾಪಡಿಕೊಳ್ಳಲು ಶ್ರಮಿ­ಸುತ್ತಿದ್ದೇವೆ. ಪಕ್ಷಿಗಳಿಗೆ ಗಾಯಗಳಾದಾಗ, ಅವುಗಳಿಗೆ ಚಿಕಿತ್ಸೆ ಕೊಡಿಸಲೆಂದೇ ಬೆಂಗಳೂರಿನಿಂದ ವೈದ್ಯರನ್ನು ಕರೆತರುತ್ತೇವೆ’ ಎಂದು ಸಂಘದ ಸಂಸ್ಥಾಪಕ  ವೇಣುಗೋಪಾಲರೆಡ್ಡಿ ‘ಪ್ರಜಾವಾಣಿ’ಗೆ  ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT