3

ಎನ್‌.ಆರ್.ಪುರ: 65 ಮಿ.ಮೀ. ಮಳೆ

Published:
Updated:
ನರಸಿಂಹರಾಜಪುರದಲ್ಲಿ ಮೆಣಸೂರು ಗ್ರಾಮದ ಶಾಶ್ವತ ಕುಡಿಯುವ ನೀರಿನ ಬ್ಯಾರೇಜ್ ತುಂಬಿದ್ದು ಜನರು ಮೀನು ಹಿಡಿಯಲು ಜಮಾಯಿಸಿದ್ದರು.

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದವರೆಗೆ ಒಟ್ಟು 65 ಮಿ.ಮೀ ಮಳೆಯಾಗಿದೆ.

ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಮೆಣಸೂರು ಗ್ರಾಮದ ವ್ಯಾಪ್ತಿಯಲ್ಲಿ ಭದ್ರಾ ಹಿನ್ನೀರಿಗೆ ಅಡ್ಡಲಾಗಿ ಕಟ್ಟಲಾಗಿರುವ ಶಾಶ್ವತ ಕುಡಿಯುವ ನೀರಿನ ಬ್ಯಾರೇಜ್ ತುಂಬಿ ಹರಿಯಿತು. ಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿ ಬಲೆಯಲ್ಲಿ ಹತ್ತುವ ಮೀನುಗಳನ್ನು ಹಿಡಿಯಲು ಜನರು ಜಮಾಯಿಸಿದ್ದರು. ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು ಕೆಲವು ಭಾಗದಲ್ಲಿ ರೈತರು ಭತ್ತದ ಗದ್ದೆಗೆ ಸಸಿ ಹಾಕುವ ಕಾರ್ಯದಲ್ಲಿ ನಿರತರಾಗಿದ್ದು ಕಂಡು ಬಂತು. ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ 12 ಇಂಚು ಮಳೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 34.50 ಇಂಚು ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !