ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹೆಚ್ಚಳ

ಕಾಂಗ್ರೆಸ್‌ ಅಭಿನಂದನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್
Last Updated 18 ಜನವರಿ 2021, 2:39 IST
ಅಕ್ಷರ ಗಾತ್ರ

ತರೀಕೆರೆ: ‘ಅಧಿಕಾರ ವಿಕೇಂದ್ರಿಕರಣದ ಜೊತೆಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರವು ಹೆಚ್ಚಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತುಜೆಡಿಎಸ್ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿ, ‘ಅಧಿಕಾರ ಮಾಡುವವರಿಗೆ ಸಿ.ಡಿ. ಕಾಟವಾದರೆ ವಿಪಕ್ಷಗಳಿಗೆ ಇ.ಡಿ. ಕಾಟ ಇದೆ. ಯಾವ ರಾಜಕೀಯ ಪಕ್ಷಗಳೂ ನೆಮ್ಮದಿಯಾಗಿಲ್ಲ’ ಎಂದು ಹೇಳಿದರು.

‘ಜನಸೇವೆ ಮಾಡಲು ಗ್ರಾಮ ಪಂಚಾಯಿತಿಗಿಂತ ಬೇರೊಂದು ಹುದ್ದೆ ಇಲ್ಲ. ಎಲ್ಲರೂ ರಾಜಕೀಯ ಉನ್ನತ ಹುದ್ದೆಗಳನ್ನು ಬಯಸಬಾರದು.
ಪಂಚಾಯತ್ ರಾಜ್ ವ್ಯವಸ್ಥೆ ಸಮರ್ಪಕ ಜಾರಿಗೆ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ಧಾರ್ಥ ಮಾತನಾಡಿ, ‘ತಳ ಮಟ್ಟದ ಕಾರ್ಯಕರ್ತರೇ ಪಕ್ಷದ ಭದ್ರ ಬುನಾದಿಯಾಗಿದ್ದಾರೆ. ಪಕ್ಷವು ಕೋವಿಡ್ ಸಮಯದಲ್ಲಿಯೂ ಜನರ ಪರ ಕೆಲಸ ಮಾಡಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯರು ಮುಂಬರುವ ಎಲ್ಲಾ ಚುನಾವಣೆಗಳಿಗೂ ತಯಾರಾಗಿರಬೇಕು. ಒಗ್ಗೂಡಿ ಕೆಲಸವನ್ನು ಮಾಡೋಣ’ ಎಂದರು.

ಮಾಜಿ ಶಾಸಕರಾದ ಟಿ.ಎಚ್.ಶಿವಶಂಕರಪ್ಪ, ಎಸ್.ಎಂ.ನಾಗರಾಜು, ಜಿ.ಎಚ್.ಶ್ರೀನಿವಾಸ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಡಾ.ವಿಜಯ ಕುಮಾರ್, ಸಂದೀಪ್, ಪವನ್, ಧ್ರುವ ಕುಮಾರ್, ದೋರನಾಳು ಪರಮೇಶ್, ಟಿ.ಎಸ್.ಧರ್ಮರಾಜು, ಟಿ.ಎಸ್.ಪ್ರಕಾಶ್, ಸಂತೋಶ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT