ಶೃಂಗೇರಿ (ಚಿಕ್ಕಮಗಳೂರು): ಪಟ್ಟಣದ ಈಡಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆಯುತ್ತಿದ್ದ ಮದುವೆಯು ವಧು ನಿರಾಕರಣೆಯಿಂದ ನಿಂತು ಹೋಗಿದೆ.

ಶೃಂಗೇರಿ ತಾಲ್ಲೂಕಿನ ಯುವಕ ಹಾಗೂ ಬಾಳೆಹೊನ್ನೂರು ಸಮೀಪದ ಗ್ರಾಮದ ಯುವತಿ ನಡುವೆ ಮದುವೆ ನಿಗದಿಯಾಗಿತ್ತು. ಮೂರು ತಿಂಗಳ ಹಿಂದೆ ನಿಶ್ಚಿತಾರ್ಥವೂ ನಡೆದಿತ್ತು.

ನಿಶ್ಚಿತಾರ್ಥದ ನಂತರ ವಧು ಕೇಳಿದ ಪ್ರಶ್ನೆಗಳಿಗೆ ವರ ಸರಿಯಾದ ಉತ್ತರ ನೀಡಿಲ್ಲ. ತಾಯಿಯ ಅನಾರೋಗ್ಯ ಸೇರಿ ಎಲ್ಲಾ ವಿಷಯಗಳನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ವರನ ಕುರಿತು ಅಪರಿಚಿತರು 5 ಪುಟಗಳ ಪತ್ರ ಬರೆದು ವಧು ಮನೆಗೆ ರಿಜಿಸ್ಟರ್ ಪೋಸ್ಟ್ ಕಳಿಸಿದ್ದರು. ಈ ಎಲ್ಲಾ ಕಾರಣಗಳಿಂದ ಮದುವೆಗೆ ನಿರಾಕರಿಸಲಾಗಿದೆ ಎಂದು ತಿಳಿಸಿ ವಧು ಹೊರಟರು.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಯುವತಿ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅದ್ದರಿಂದ ಮದುವೆ ನಿಂತಿದೆ. ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮದುವೆ ನಿಂತು ಹೋಗಿದ್ದರಿಂದ ಎಲ್ಲರೂ ವಾಪಸ್ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.