ಭಾನುವಾರ, ಏಪ್ರಿಲ್ 2, 2023
32 °C
ಕೂಲಿಕಾರನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿತ

ಬಜರಂಗದಳದ ಮೂವರ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಮುದ್ರೆಮನೆ (ಬೇಲೂರು ರಸ್ತೆ) ಬಳಿ ಅಸ್ಸಾಂನ ಕೂಲಿಕಾರ ಗಾಜಿವುರ್‌ ರೆಹಮಾನ್‌ ಅವರು ಗೋಮಾಂಸ ಮಾರಾಟ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವರನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣದಲ್ಲಿ ಬಜರಂಗದಳದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗಾಜಿವುರ್‌ ಪತ್ನಿ ಅಲಿಸಾ ಅವರು ನಿತಿನ್‌, ಅಜಿತ್ ಹಾಗೂ ಮಧು ವಿರುದ್ಧ ದೂರು ನೀಡಿದ್ದಾರೆ. ಗಾಜಿವುರ್‌ನನ್ನು ಕಂಬಕ್ಕೆ ಕಟ್ಟಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

‘ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಶೋಧ ನಡೆಯುತ್ತಿದೆ’ ಎಂದು ಗೋಣಿಬೀಡು ಠಾಣೆ ಪಿಎಸ್‌ಐ ಎಂ.ಆರ್‌. ಧನಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಜಿವುರ್‌ ವಶಕ್ಕೆ: ತಾಲ್ಲೂಕಿನ ಮುದ್ರೆಮನೆ ಕಾಫಿ ಎಸ್ಟೇಟ್‌ನ ಕೂಲಿ ಲೈನ್‌ ಪ್ರದೇಶದಲ್ಲಿ ಗೋಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಾಜಿವುರ್‌ ರೆಹಮಾನ್‌ನನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು