ಶೃಂಗೇರಿ: ‘ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ದೈಹಿಕ, ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ’ ಎಂದು ಬೆಂಗಳೂರು ಬೇರು ಭೂಮಿ ತಂಡದ ಮುಖ್ಯಸ್ಥ ಯಶಸ್ ಹೇಳಿದರು.

ಶೃಂಗೇರಿಯ ತುಂಗಾ ನದಿ ಸ್ನಾನಘಟ್ಟದಲ್ಲಿ ಬೆಂಗಳೂರಿನ ಬೇರುಭೂಮಿ, ಜೀವನ ಮುಕ್ತಿ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ಬಳಕೆ ಮಿತಿ ಮೀರುತ್ತಿದೆ. ಇದರಿಂದ ಮಣ್ಣು, ನೀರು ಸೇರಿದಂತೆ ಇಡೀ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ. ಪ್ರಜ್ಞಾವಂತ ನಾಗರಿಕರು ಪ್ಟಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು’ ಎಂದರು.

ಸಂಘಟನೆಗಳ ಸದಸ್ಯರು ಪರಿಸರ ಜಾಗೃತಿ ಮೂಡಿಸಿದರು. ರಂಜಿತ್ ಗೌಡ, ಮೀನಾ ಶೆಟ್ಟಿ, ಕಾಂತರಾಜು, ವಿದ್ಯಾ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.