ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ದಾಖಲೆ ಪುಸ್ತಕ ಸೇರಿದ ಹಮ್ದಿ

ಕಾಫಿನಾಡಿನ ಹುಡುಗನ ಚಿತ್ರಕಲೆ ಸಾಧನೆ
Last Updated 21 ನವೆಂಬರ್ 2018, 20:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ವಾಸವಿ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ ಹಮ್ದಿ ಇಮ್ರಾನ್‌ ಅವರು ವರ್ಣಚಿತ್ರ ರಚನೆಯಲ್ಲಿ ಸಾಧನೆ ಮೆರೆದು ಏಷ್ಯಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಮ್ದಿ ತಾಯಿ ಶಹಿದಾ ಶಬಾನಾ ಮಾತನಾಡಿ, ‘ಕಿರಿಯ ವಯಸ್ಸಿನಲ್ಲಿ 400ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ ಸಾಧನೆಯನ್ನು ಪರಿಗಣಿಸಿ, ಕಿರಿಯ ಬಾಲ ವರ್ಣಚಿತ್ರ ಕಲಾವಿದ ಎಂದು ಪ್ರಮಾಣಪತ್ರ ನೀಡಿದ್ದಾರೆ. ಸೆಪ್ಟೆಂಬರ್‌ 24 ರಂದು ದಾಖಲೆ ಪುಸ್ತಕಕ್ಕೆ ಸೇರ್ಪಡೆ ಮಾಡಿದ್ದಾರೆ. ನ.10ರಂದು ಪ್ರಮಾಣ ಪತ್ರ ಕೈಸೇರಿತು. ಕಳೆದ ವರ್ಷ ಇಂಡಿಯಾ ದಾಖಲೆ ಪುಸ್ತಕ ಸೇರ್ಪಡೆಯಾಗಿ ಕೀರ್ತಿ ಮೆರೆದಿದ್ದ’ ಎಂದು ತಿಳಿಸಿದರು.

ಚಿಕ್ಕಂದಿನಿಂದಲೇ ಹಮ್ದಿಗೆ ಚಿತ್ರ ರಚನೆಯಲ್ಲಿ ಆಸಕ್ತಿ ಇತ್ತು. ಮೂರನೇ ತರಗತಿಯಲ್ಲಿ ಮೊದಲ ಬಾರಿಗೆ ಪತ್ರಿಭಾ ಕಾರಂಜಿಯಲ್ಲಿ ಪ್ರತಿಭೆ ಪ್ರದರ್ಶಿಸಿದ್ದ. ಪೆನ್ಸಿಲ್‌ ಸ್ಕೆಚ್‌, ಚಾರ್‌ಕೋಲ್‌, ಕ್ರಯಾನ್ಸ್‌, ಆಕ್ರಲಿಕ್‌, ತೈಲಚಿತ್ರ, ವಾಟರ್‌ ಪೇಂಟಿಂಗ್‌ ಸಹಿತ ಎಲ್ಲ ಶೈಲಿಯೂ ಕರಗತವಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಆನ್‌ಲೈನ್‌ ಗ್ಯಾಲರಿಯಲ್ಲಿ ಕಲಾಕೃತಿಗಳು ಪ್ರದರ್ಶಿತವಾಗಿವೆ’ ಎಂದು ತಿಳಿಸಿದರು.

‘ಪಿಕಾಸೊ ಅಂತಾರಾಷ್ಟ್ರೀಯ ಸಂಸ್ಥೆಯು ವತಿಯಿಂದ ಮೂರು ತಿಂಗಳಿಗೊಮ್ಮೆ ನಡೆಸುವ ಆನ್‌ಲೈನ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾನೆ. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪುರಸ್ಕಾರಗಳನ್ನು ಪಡೆದಿದ್ದಾನೆ. ಏಷ್ಯಾ ದಾಖಲೆ ಪುಸಕ್ತಕ್ಕೆ ಸೇರ್ಪಡೆಯಾಗಿದ್ದು ಸಾಧನೆಯ ಹಾದಿಯ ಒಂದು ಮೈಲಿಗಲ್ಲು’ ಎಂದು ಹೇಳಿದರು.

ಹಮ್ದಿ ತಂದೆ ಖಾಲಿದ್‌ ಇಮ್ರಾನ್‌, ಚಿತ್ರಕಲಾ ಶಿಕ್ಷಕ ಆರ್‌.ಎಂ.ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT