ತರೀಕೆರೆ: ‘ಸಮುದಾಯದ ಹಿರಿಯರ ಮಾರ್ಗದರ್ಶನ, ಯುವಕರ ಪ್ರೋತ್ಸಾಹ, ಸಮಿತಿ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದಿಂದ ಸಮುದಾಯದ ಕಾರ್ಯಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ’ ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್. ಶ್ರೀಧರ್ ಹೇಳಿದ್ದಾರೆ.

ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಅನಂತ ನಾಡಿಗ್ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತ ಅನಂತ ನಾಡಿಗ್ ಅವರು, ನನಗೆ ಹಿರಿಯ ಸಹೋದರರ ಸಮಾನರು. ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆಲ್ಲರಿಗೂ ಸಂತೋಷವಾಗಿದೆ. ಅವರ ಸೇವೆಗೆ ಇನ್ನೂ ಹೆಚ್ಚು ಪ್ರಶಸ್ತಿಗಳು ದೊರಕುವಂತಾಗಲಿ ಎಂದು ಶುಭ ಕೋರಿದರು.

ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅನಂತ ನಾಡಿಗ್ ಅವರ ಕಾರ್ಯತತ್ಪರತೆ ಹಾಗೂ ಆಸಕ್ತಿ ಮೆಚ್ಚುವಂತಹದ್ದು. ಕಳೆದ 40 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಅವಿರತವಾಗಿ, ವಸ್ತುನಿಷ್ಠ ಸುದ್ದಿಗಳನ್ನು ಬರೆದು ಮಾದರಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ಕನ್ನಡಶ್ರೀ ಬಿ.ಎಸ್. ಭಗವಾನ್, ತೆರಿಗೆ ಸಲಹೆಗಾರ ಆರ್.ಎನ್. ಶ್ರೀನಿವಾಸ್, ನಿವೃತ್ತ ಉಪನ್ಯಾಸಕ ಬಿ.ಎಚ್. ಕುಮಾರಸ್ವಾಮಿ, ಬ್ರಾಹ್ಮಣ ಸಮಿತಿ ಉಪಾಧ್ಯಕ್ಷ ಡಿ.ವಿ. ಕೃಷ್ಣಮೂರ್ತಿ ಮಾತನಾಡಿದರು.

ಬ್ರಾಹ್ಮಣ ಸೇವಾ ಸಮಿತಿ, ಸ್ಕಂದ ಮಾತಾ ವಿಪ್ರ ಮಹಿಳಾ ಸಂಘ ಅಧ್ಯಕ್ಷೆ ಭಾಮಾ ಸುಬ್ರಹ್ಮಣ್ಯ, ತರೀಕೆರೆ ಶ್ರೀ ಶೃಂಗೇರಿ ಶಾರದಾ ಪೀಠ ಶಾಖಾ ಮಠದ ಧರ್ಮದರ್ಶಿ ಆರ್. ಕೃಷ್ಣಮೂರ್ತಿ, ಬ್ರಾಹ್ಮಣ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ, ನಿರ್ದೇಶಕ ಟಿ.ಎಸ್. ರವಿಕುಮಾರಸ್ವಾಮಿ, ಎನ್.ಕೆ. ಸುಬ್ರಹ್ಮಣ್ಯ, ಖಚಾಂಚಿ ಡಿ.ಜಿ. ಸಚಿನ್, ಶಾರದ ಎನ್. ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.