ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ

ಖಾಸಗಿ ವೈದ್ಯರ ಮುಷ್ಕರ; ಖಾಸಗಿ ಆಸ್ಪತ್ರೆ ಒಪಿಡಿ ಬಂದ್‌
Last Updated 28 ಜುಲೈ 2018, 15:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳನ್ನು ಶನಿವಾರ ಬಂದ್‌ ಮಾಡಿ ಖಾಸಗಿ ವೈದ್ಯರು ಮುಷ್ಕರ ಮಾಡಿದರು.

ಶನಿವಾರ ಬೆಳಿಗ್ಗೆ 6ರಿಮದ ಸಂಜೆ 6 ಗಂಟೆವರೆಗೆ ನರ್ಸಿಂಗ್ ಹೋಮ್‌ಗಳು, ಕ್ಲಿನಿಕ್‌ಗಳು, ಆಸ್ಪತ್ರೆಗಳ ಹೊರರೋಗಿ ವಿಭಾಗಗಳು ಬಂದ್‌ ಆಗಿದ್ದವು. ಖಾಸಗಿ ಆಸ್ಪತ್ರೆಗಳ ಬಾಗಿಲಲ್ಲಿ ಅಂಟಿಸಿದ್ದ ಎನ್‌ಎಂಎ ಮಸೂದೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ’ ಫಲಕ ನೋಡಿ ಕೆಲವರು ಜಿಲ್ಲಾಸ್ಪತ್ರೆಗೆ ತೆರಳಿದರೆ, ಮನೆಗೆ ವಾಪಸ್ಸಾದರು.

‘ನಿಯಮಿತವಾಗಿ ತಿಂಗಳಲ್ಲಿ ಎರಡು ಬಾರಿ ಇಲ್ಲಿನ ಕ್ಲಿನಿಕ್‌ಗೆ ಚಿಕಿತ್ಸೆಗೆ ಬರುತ್ತೇನೆ. ಮುಷ್ಕರ ಇದ್ದದ್ದು ಗೊತ್ತಿರಲಿಲ್ಲ. ನಾಳೆ ಮತ್ತೆ ಬರಬೇಕು’ ಎಂದು ಕಡೂರಿನ ರಾಜೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ.ಎಂ.ಜಿ.ಶ್ರೀಧರ್‌, ಇತರ 30 ಖಾಸಗಿ ವೈದ್ಯರು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಖಾಸಗಿ ವೈದ್ಯರ ಮುಷ್ಕರದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ನಿತ್ಯಕ್ಕಿಂತ ರೋಗಿಗಳ ದಟ್ಟಣೆ ಹೆಚ್ಚು ಇತ್ತು. ಬೆಳಿಗ್ಗೆ ನಿಗಿದತ ಸಮಯಕ್ಕಿಂತ ಕೊಂಚ ಮುಂಚಿತವಾಗಿಯೇ ಎಲ್ಲ ವಿಭಾಗಗಳನ್ನು ತೆರೆಯಲಾಗಿತ್ತು.

‘ನಿತ್ಯಕ್ಕಿಂತ ಶೇ 5 ರಷ್ಟು ಹೆಚ್ಚು ರೋಗಿಗಳು ಇದ್ದರು. ರಾತ್ರಿ ಪಾಳಿ ನಿರ್ವಹಿಸಿದ ವೈದ್ಯರು, ಗುತ್ತಿಗೆ ಆಧಾರದ ವೈದ್ಯರು ಎಲ್ಲರೂ ಕಾರ್ಯನಿರ್ವಹಿಸಿದರು. ಯಾರಿಗೂ ರಜೆ ನೀಡಿರಲಿಲ್ಲ. ಎಲ್ಲ ರೋಗಿಗಳನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಯಿತು’ ಎಂದು ಜಿಲ್ಲಾಸ್ಪತ್ರೆ ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಆರ್.ದೊಡ್ಡಮಲ್ಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT