ಗುರುವಾರ , ಅಕ್ಟೋಬರ್ 17, 2019
21 °C

ಶ್ರೀರಾಮಸೇನೆ: ನಾಳೆಯಿಂದ ದತ್ತಮಾಲಾ ಧಾರಣೆ

Published:
Updated:
Prajavani

ಚಿಕ್ಕಮಗಳೂರು:ಶ್ರೀರಾಮ ಸೇನೆ ಸಂಘಟನೆ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲೆ ಅಭಿಯಾನದ ನಿಮಿತ್ತ ಇದೇ 6ರಂದು ಬೆಳಿಗ್ಗೆ 9ಗಂಟೆಗೆ ನಗರದ ಶಂಕರಮಠದಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಇಲ್ಲಿ ಶನಿವಾರ ಹೇಳಿದರು.

ದತ್ತಮಾಲಾ ಧಾರಣೆಯಲ್ಲಿ ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರಕುಲಕರ್ಣಿ, ಪ್ರಧಾನಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಸಂಚಾಲಕ ಮಹೇಶ್ ಕಟ್ಟಿನಮನೆ ಭಾಗವಹಿಸುವರು. ದತ್ತಮಾಲಾಧಾರಣೆ ನಂತರ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಇದೇ 6ರಿಂದ 13ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ. ಜಿಲ್ಲೆಯ ಕೊಪ್ಪ, ಮೂಡಿಗೆರೆ, ಬಾಳೆಹೊನ್ನೂರು, ಆಲ್ದೂರಿನಲ್ಲಿಯೂ ದತ್ತಮಾಲಾಧಾರಣೆ ನಡೆಯಲಿದೆ ಎಂದರು.

ತಾಲ್ಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಈ ಜಾಗದಲ್ಲಿ ಋಷಿಗಳು ತಪಸ್ಸು ಮಾಡಿದರು ಎನ್ನುವ ನಂಬಿಕೆ ಇದೆ. ಇಂತಹ ಧಾರ್ಮಿಕ ಸ್ಥಳದಲ್ಲಿ ಮಾಂಸಹಾರ ಸೇವೆನೆ, ಮದ್ಯ ಪಾನ, ಧೂಮಪಾನ, ಪ್ರವಾಸಿಗರ ಅಸಭ್ಯ ವರ್ತನೆಗಳು ಹೆಚ್ಚಾಗುತ್ತಿವೆ. ಗಿರಿಶ್ರೇಣಿಗೆ ಸಾಗುವ ರಸ್ತೆಯಲ್ಲಿನ ವಾಹನ ತಪಾಸಣಾ ಚೌಕಿಗಳು ನಿಷ್ಕ್ರಿಯವಾಗಿವೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ದಿಲೀಪ್ ಶೆಟ್ಟಿ, ಮನೇಶ್, ಮಹೇಶ್ ಇದ್ದರು.

Post Comments (+)