ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲ್ದೂರು: ಬೆಂಕಿಗೆ ಆಹುತಿಯಾದ ಕಾಫಿ ತೋಟ

Published 27 ಮಾರ್ಚ್ 2024, 14:01 IST
Last Updated 27 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ಆಲ್ದೂರು: ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಕೆಳಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳ ಹಾಂದಿ ದೇವಿಗುಡ್ಡ ಗ್ರಾಮದಲ್ಲಿನ ಕಾಫಿ ತೋಟಗಳು ಸುಟ್ಟು ಕರಕಲಾಗಿವೆ.

‘ನಮ್ಮ ತಾಯಿ ತುಂಗಮ್ಮ ಹೆಸರಿನಲ್ಲಿದ್ದ ಒಂದು ಎಕರೆ ಅಡಿಕೆ ತೋಟ, ಅಕ್ಕಪಕ್ಕದ ವಿಶ್ವನಾಥ್, ದಿವ್ಯಪ್ರಸಾದ್ ಎಂಬುವವರ ತೋಟ ಕೂಡ ಬೆಂಕಿಗೆ ಆಹುತಿಯಾಗಿದೆ. ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ಸುಟ್ಟು ಹೋಗಿವೆ. ತೋಟದ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹೊತ್ತಿರಬಹುದೆಂದು ಅಂದಾಜಿಸಲಾಗಿದೆ. ಸೋಮವಾರ ಯಾರೂ ತೋಟಕ್ಕೆ ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ, ಮಂಗಳವಾರ ವಿಷಯ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆ, ಮೆಸ್ಕಾಂಗೆ ಮಾಹಿತಿ ನೀಡಲಾಗಿದೆ. ಪರಿಹಾರಕ್ಕಾಗಿ ಶಾಸನರಿಗೆ ಮನವಿ ನೀಡಲಾಗಿದೆ’ ಎಂದು ಸಂತ್ರಸ್ತ ಪ್ರತಾಪ್ ತಿಳಿಸಿದ್ದಾರೆ.

ಮೇಗಳ ಹಾಂದಿ ದೇವಿಗುಡ್ಡ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಕಾಫಿ ತೋಟ ಸಂಪೂರ್ಣ ಸುಟ್ಟು ಹೋಗಿದೆ
ಮೇಗಳ ಹಾಂದಿ ದೇವಿಗುಡ್ಡ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಕಾಫಿ ತೋಟ ಸಂಪೂರ್ಣ ಸುಟ್ಟು ಹೋಗಿದೆ
ತೋಟದ ಬಳಿ ಹಾದು ಹೋಗಿರುವ ಮೆಸ್ಕಾಂ ವಿದ್ಯುತ್ ಲೈನ್
ತೋಟದ ಬಳಿ ಹಾದು ಹೋಗಿರುವ ಮೆಸ್ಕಾಂ ವಿದ್ಯುತ್ ಲೈನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT