ಅಜ್ಜಂಪುರ: ‘ವಿಶ್ವ ವಿದ್ಯಾನಿಲಯಗಳು, ಜಾನಪದವನ್ನು ಪಠ್ಯವಾಗಿ ಸೇರ್ಪಡೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್. ಬಾಲಾಜಿ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಡಿ ಗಿರಿಯಾಪುರ ಗ್ರಾಮದಲ್ಲಿ ಈಚೆಗೆ ನಡೆದ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ವಿಶ್ವ ಬುಡಕಟ್ಟು ಹಾಗೂ ಜಾನಪದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ ಮಾತನಾಡಿ, ‘ಜನಪದರು ಹಾಡುವ, ಸೃಜಿಸುವ ಸಾಮರ್ಥ್ಯ ಪಡೆದವರು. ಕಾಯಕದಲ್ಲಿ ತೊಡಗಿರುವಾಗಲೇ ತ್ರಿಪದಿ ಕಟ್ಟುತ್ತಿದ್ದರು. ಅದೇ ಜಾನಪದವಾಗಿದೆ. ಮಹಿಳಾ ಘಟಕ ವತಿಯಿಂದ ಜಿಲ್ಲಾ ಸಮ್ಮೇಳನ ಮಾಡಲಾಗುವುದು’ ಎಂದು ತಿಳಿಸಿದರು.

ಪರಿಷತ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ್ ಮಾತನಾಡಿ, ತಾಯಂದಿರು ಮಕ್ಕಳಿಗೆ ಬದುಕಿನ ಮೌಲ್ಯ, ಪ್ರೀತಿಯನ್ನು ಕಲಿಸಿದವರು. ಉಪಕಾರ ಸ್ಮರಣೆ ಜನಪದರಲ್ಲಿ ಹೆಚ್ಚು ಕಾಣುತ್ತೇವೆ. ಆದರೆ, ಅದು ಮಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ಕೆ. ಪುಷ್ಪ, ಜನಪದ ಗೀತೆ ಗಾಯನ ಮಾಡಿದರು. ಮುಖಂಡ ಬಂಡ್ರೆ ನಿರಂಜನ್ ಪಟೇಲ್, ಪಂಚಾಯಿತಿ ಸದಸ್ಯ ಮಂಜಯ್ಯ, ಹಿರಿಯ ಜಾನಪದ ಕಲಾವಿದೆ ಲಕ್ಷ್ಮಿ ದೇವಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರಿ, ಶಿವನಿ ಹೋಬಳಿ ಘಟಕದ ಮಹಾದೇವಿ, ಶಿಕ್ಷಕ ಮೋಹನ್ ಕುಮಾರ್, ರಂಜಿತಾ ಶ್ರೀನಿವಾಸ್, ರಾಜು ಇದ್ದರು.

ಇದಕ್ಕೂ ಮೊದಲು ಶಿವನಿ ಘಟಕದ ನೂತನ ಅಧ್ಯಕ್ಷೆ ರೂಪ ಮಧು ಅವರಿಗೆ, ನಿಕಟ ಪೂರ್ವ ಅಧ್ಯಕ್ಷೆ ಮಧು ನಿಂಗಪ್ಪ ಪರಿಷತ್ ಧ್ವಜ ಹಸ್ತಾಂತರಿಸಿದರು. ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.