ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್‌ ಕುಸಿದು 8 ಮಂದಿಗೆ ಗಾಯ

Last Updated 20 ಮೇ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ಕಮ್ಮನಹಳ್ಳಿಯ ‘ಅನ್‌ಲಿಮಿಟೆಡ್‌ ಫ್ಯಾಷನ್ಸ್‌’ ಮಳಿಗೆಯಲ್ಲಿ ಭಾನುವಾರ ಲಿಫ್ಟ್‌ ಕುಸಿದು ಎಂಟು ಮಂದಿ ಗಾಯಗೊಂಡಿದ್ದಾರೆ.

‘ಸಂಜೆ 5.30ಕ್ಕೆ ಮಳಿಗೆಯ ಎರಡನೆ ಮಹಡಿಯಲ್ಲಿದ್ದ ಗ್ರಾಹಕರು ಕೆಳಗಿರುವ ಮಹಡಿಗಳಿಗೆ ಬರಲು ಲಿಫ್ಟ್‌ ಹತ್ತಿದಾಗ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ತುಂಬಿದ್ದರಿಂದ ಲಿಫ್ಟ್‌ ಕುಸಿದು ನೆಲಮಹಡಿಗೆ ಅಪ್ಪಳಿಸಿದೆ. ಈ ಸಂದರ್ಭ ದೊಡ್ಡ ಶಬ್ದ ಕೇಳಿಸಿದ್ದು, ಅಕ್ಕಪಕ್ಕದ ಮಳಿಗೆಯವರು ಓಡಿ ಬಂದು ತೊಂದರೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT