ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು | ರಸ್ತೆ ಬದಿ ಕಸದ ರಾಶಿ: ಸಾರ್ವಜನಿಕರಿಗೆ ತಪ್ಪದ ಗೋಳು

ಸ್ವಚ್ಛತೆ ಕಾಪಾಡಲು ಸ್ಥಳೀಯ ಆಡಳಿತಕ್ಕೆ ಜನರ ಮನವಿ
ಜೋಸೆಫ್.ಎಂ
Published 30 ಏಪ್ರಿಲ್ 2024, 6:35 IST
Last Updated 30 ಏಪ್ರಿಲ್ 2024, 6:35 IST
ಅಕ್ಷರ ಗಾತ್ರ

ಆಲ್ದೂರು: ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಇದ್ದು, ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಲ್ದೂರು ಪಂಚಾಯಿತಿ ಹವ್ವಳ್ಳಿ ವಾರ್ಡ್‌ನ ಮೂಡಿಗೆರೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಬಿದ್ದಿದೆ. ಇಲ್ಲೇ ಸಮೀಪದಲ್ಲೇ ಮಾಸ್ತಿಯಮ್ಮ ಗುಡಿ ಮತ್ತು ಅಮೃತೇಶ್ವರ ದೇವಸ್ಥಾನವು ಇದ್ದು, ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಬೇಕಿದೆ.

ಹವ್ವಳ್ಳಿ ವಾರ್ಡ್‌ನ ಎಚ್‍.ಎಸ್, ಗಿರೀಶ್ ಮಾತನಾಡಿ,  ‘ಪಂಚಾಯಿತಿಯಲ್ಲಿ ಒಟ್ಟು ಹತ್ತು ವಾರ್ಡ್‌ಗಳಿದ್ದು, ಕೆಲ ವಾರ್ಡ್‌ಗಳಿಗೆ ಮಾತ್ರ ಕಸ ಸಂಗ್ರಹಿಸುವ ಟ್ರಾಕ್ಟರ್, ಬರುತ್ತಿದೆ. ಕಸದ ರಾಶಿಯಲ್ಲಿರುವ ಕೊಳೆತ ಹಣ್ಣು, ತರಕಾರಿ ತಿನ್ನಲು ಬರುವ ಜಾನುವಾರುಗಳು ಅದರೊಟ್ಟಿಗೆ ಪ್ಲಾಸ್ಟಿಕ್ ಸಹ ಸೇವಿಸುತ್ತಿದ್ದು,  ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಸಮೀಪದ ಗದ್ದೆಯಲ್ಲಿ ಸಹ ಕಸವನ್ನು ಸುರಿಯಲಾಗಿದೆ. ಇಲ್ಲಿ ಸಮೀಪದ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಮಾಹಿತಿ ಸಂಗ್ರಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು. 

ಪಟ್ಟಣದ ಹವ್ವಳ್ಳಿ ವಾರ್ಡಿನ ಬಳಿ ಹಾದು ಹೋಗುವ ಮೂಡಿಗೆರೆ ಹೆದ್ದಾರಿ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಸುರೆದಿರುವ ಪ್ಲಾಸ್ಟಿಕ್ ಕಸದ ರಾಶಿ
ಪಟ್ಟಣದ ಹವ್ವಳ್ಳಿ ವಾರ್ಡಿನ ಬಳಿ ಹಾದು ಹೋಗುವ ಮೂಡಿಗೆರೆ ಹೆದ್ದಾರಿ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಸುರೆದಿರುವ ಪ್ಲಾಸ್ಟಿಕ್ ಕಸದ ರಾಶಿ

ಶೀಘ್ರದಲ್ಲೇ ಕ್ರಮ

‘ಈ ಪ್ರದೇಶದಲ್ಲಿ ಕಸ ಸ್ವಚ್ಛಗೊಳಿಸಿದರೂ ಮತ್ತೆ ಕಸ ಹಾಕಿದ್ದಾರೆ. ಪಿಡಿಒ ಅವರಿಗೆ ಚುನಾವಣೆ ನಿಮಿತ್ತ ಕೆಲವು ದಿನ  ಬಿಡುವಿರಲಿಲ್ಲ ಚುನಾವಣೆ ಮುಗಿದಿದ್ದು ಶೀಘ್ರವೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಕಸ ಹಾಕದಂತೆ ಸೂಚನಾ ಫಲಕವನ್ನು ಅಳವಡಿಸಲಾಗುವುದು’ ಎಂದು ಪಂಚಾಯಿತಿ ಅಧ್ಯಕ್ಷೆ ಜಯಶೀಲಾ ಚಿದಂಬರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT