ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲೇಜಿಗೆ ಎ+ ಮಾನ್ಯತೆ ದೊರಕಿಸುವ ಆಶಯ: ಶಾಸಕ ಕೆ.ಎಸ್.ಆನಂದ್

Published 9 ಜುಲೈ 2024, 13:33 IST
Last Updated 9 ಜುಲೈ 2024, 13:33 IST
ಅಕ್ಷರ ಗಾತ್ರ

ಕಡೂರು: ನ್ಯಾಕ್ ಸಮಿತಿಯಿಂದ ‘ಎ’ ಶ್ರೇಣಿ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎ+ ಶ್ರೇಣಿ ದೊರಕಿಸಿಕೊಡುವುದಕ್ಕೆ ಪ್ರಥಮ ಆದ್ಯತೆ ನೀಡುವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

32 ವರ್ಷಗಳ ನಂತರ ಕಾಲೇಜು ನ್ಯಾಕ್ ಸಮಿತಿಯಿಂದ ‘ಎ’ ದರ್ಜೆಯ ಮಾನ್ಯತೆ ಗಳಿಸಿದೆ. ಎ+ ಮಾನ್ಯತೆ ಗಳಿಸಲು ಬಹುಮುಖ್ಯವಾಗಿ ಕಾಲೇಜಿಗೆ ವಿಶಾಲ ಜಾಗ ಅಗತ್ಯ. ಶೀಘ್ರದಲ್ಲಿ ಈ ಕೊರತೆ ನೀಗಿಸಿ ಕಾಲೇಜಿಗೆ ಎ+ ಮಾನ್ಯತೆ ದೊರಕಿಸುವುದು ನನ್ನ ಗುರಿಯಾಗಿದೆ. ನಿರುದ್ಯೋಗ ಸಮಸ್ಯೆಗೆ ಗಣನೀಯ ಪರಿಹಾರ ದೊರಕಿಸಿಕೊಳ್ಳಲು ಉದ್ಯೋಗ ಮೇಳವನ್ನು ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಆಯೋಜಿಸುವ ಆಶಯ ನನ್ನದಾಗಿದೆ ಎಂದರು.

ಪ್ರಾಚಾರ್ಯ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಕೋಶದ ಸಂಯೋಜಕ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್.ಬಿ‌.ಮಂಜುನಾಥ್, ಹಮೀದಾಬಾನು ಬೇಗಂ, ರಾಘವೇಂದ್ರ ಕುಮಾರ್, ಎಸ್.ಕುಮಾರ್, ತಿಮ್ಮೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT