ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ| ವಿವಿಧ ಕಡೆ ಮದ್ಯ, ನಗದು ವಶ

Published 23 ಏಪ್ರಿಲ್ 2023, 5:53 IST
Last Updated 23 ಏಪ್ರಿಲ್ 2023, 5:53 IST
ಅಕ್ಷರ ಗಾತ್ರ

ಮೂಡಿಗೆರೆ: ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧೆಡೆ ಶನಿವಾರ ತಪಾಸಣೆ ನಡೆಸಿರುವ ಕಸಬಾ ಫ್ಲೈಯಿಂಗ್ ಸ್ಕ್ವಾಡ್  ಮದ್ಯ, ನಗದು ವಶಪಡಿಸಿಕೊಂಡಿದೆ.

ಹಳಸೆ ಗ್ರಾಮದ ಕುನ್ನಳ್ಳಿ ಬಳಿ ರಮೇಶ್ ಎಂಬಾತ ಕಾರಿನಲ್ಲಿ 6.48 ಲೀ ಮದ್ಯವನ್ನು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆಯಲ್ಲಿ ತಂಡದ ಮುಖ್ಯಸ್ಥ ಇಂತೇಶ್, ಸದಸ್ಯರಾದ ಲಕ್ಷ್ಮಣ್, ಅಜೇಯ, ಚಾಲಕ ನಿತಿನ್, ವಿಡಿಯೊ ಗ್ರಾಫರ್ ವಾಸುದೇವ ಭಾಗವಹಿಸಿದ್ದರು.

ಕಿರುಗುಂದ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 1 ಲಕ್ಷ ನಗದನ್ನು ಎಸ್ಎಸ್‌ಟಿ ತಂಡದ ಸದಸ್ಯರು ವಶಕ್ಕೆ ಪಡೆದಿದ್ದಾರೆ. ತಂಡದಲ್ಲಿ ಮುಖ್ಯಸ್ಥ ಚೇತನ್ ಕುಮಾರ್, ಸದಸ್ಯರಾದ ಪ್ರಶಾಂತ್, ಸುನಿಲ್ ಕುಮಾರ್, ಸಾಗರ್ ಹಾಗೂ ಸಿಆರ್ ಪಿಎಫ್ ಸಿಬ್ಬಂದಿ ಭಾಗವಹಿಸಿದ್ದರು.

‘ಚುನಾವಣಾ ತಪಾಸಣೆಯನ್ನು ಬಿಗಿಗೊಳಿಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ದಾಖಲೆಯಿಲ್ಲದೇ ₹ 50 ಸಾವಿರಕ್ಕಿಂತ ಅಧಿಕ ಮೊತ್ತವನ್ನು ಕೊಂಡೊಯ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಬಿಲ್ ಇಲ್ಲದೆ ಸರಕು ಸಾಗಣೆ  ಮಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾದರಿ ನೀತಿ ಸಂಹಿತೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಹರ್ಷಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT