ಭಾನುವಾರ, ಮಾರ್ಚ್ 7, 2021
29 °C

ಕೊಟ್ಟಿಗೆಹಾರ: ಸಂಬಳ ಕೊಡದಿದ್ದಕ್ಕೆ ಟಿಪ್ಪರ್‌ ಕದ್ದೊಯ್ದ ಚಾಲಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಟಿಪ್ಪರ್‌ ಕದ್ದೊಯ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ನಡೆದಿದೆ.

ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡುಬಿದಿರೆಗೆ ಟಿಪ್ಪರ್‌ನಲ್ಲಿ ಹೊರಟಿದ್ದ ಚಾಲಕ ರಂಗಪ್ಪನನ್ನು ಪೊಲೀಸರು ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಿಲ್ಲಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಕಡೂರಿನ ಪ್ರಭಾಕರ್ ಅವರ ಟಿಪ್ಪರ್‌ಗೆ ರಂಗಪ್ಪ ಮೂರು ವರ್ಷಗಳಿಂದ ಚಾಲಕನಾಗಿದ್ದು, ಮಾಲೀಕರು ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ.

ರಂಗಪ್ಪನ ಕುಟುಂಬ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವಾಸವಾಗಿರುವುದರಿಂದ ಆ ಭಾಗಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಟಿಪ್ಪರ್‌ನಲ್ಲಾದರೂ ಹೋಗಿ ಮನೆ ಮುಟ್ಟಬಹುದು ಎಂದು ಮಾಲೀಕರ ಗಮನಕ್ಕೆ ತರದೇ ತಂದಿದ್ದಾನೆ. ಬಣಕಲ್ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು