ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಕಾಂ ಜನಸಂಪರ್ಕ ಸಭೆ: ಸಮಸ್ಯೆ ತಿಳಿಸಿದರೆ, ಪರಿಹಾರ

ಚಿಕ್ಕಮಗಳೂರು
Last Updated 4 ಅಕ್ಟೋಬರ್ 2019, 12:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೆಸ್ಕಾಂಗೆ ಸಾಮಾಜಿಕ ಜವಾಬ್ದಾರಿ ಇದೆ. ಸೇವೆಯಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ವಿಜಯಕುಮಾರ್ ಹೇಳಿದರು.

ನಗರದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಮೆಸ್ಕಾಂ ಗ್ರಾಹಕರ ಸಮಸ್ಯೆ ಆಲಿಸಿ, ಸೇವೆಯಲ್ಲಿ ಮತ್ತಷ್ಟು ಗುಣಮಟ್ಟ ಕಾಯ್ದುಕೊಳ್ಳುವ ನಿಮಿತ್ತ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ವಿದ್ಯುತ್ ಸೇವೆಯಲ್ಲಿ ಲೋಪ ಉಂಟಾದಲ್ಲಿ ಮೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ದೂರು ನೀಡಬಹುದು. 15ರಿಂದ30 ನಿಮಿಷಗಳಲ್ಲಿ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.

ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ನಗರಸಭೆ ಆಯುಕ್ತರ ಸಹಿ ಇರುವ ನಿರಕ್ಷೇಪಣಾ ಪತ್ರ ಕಡ್ಡಾಯವಾಗಿದೆ. ಮೀಟರ್ ಶುಲ್ಕ ₹600, ಠೇವಣಿ ₹500, ಅಭಿವೃದ್ಧಿ ಶುಲ್ಕ ನಗರದಲ್ಲಿ ₹4 ಸಾವಿರ, ಗ್ರಾಮೀಣ ಭಾಗದಲ್ಲಿ ₹3 ಸಾವಿರ, ಕೊಳಚೆಪ್ರದೇಶಗಳಿಗೆ ₹2 ಸಾವಿರ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಿ ರಸೀತಿ ಪಡೆಯಬೇಕು. ಯಾರಿಗೂ ಹೆಚ್ಚುವರಿಯಾಗಿ ಹಣ ನೀಡಬೇಡಿ ಎಂದರು.

ದೇಗುಲ, ಚರ್ಚ್, ಮಸೀದಿ, ಸಮುದಾಯಭವನಗಳ ಅಭಿವೃದ್ಧಿ ಸಮಿತಿ ವತಿಯಿಂದ ಆದಾಯ ಇಲಾಖೆಗೆ ನಮೂನೆ ‘80ಸಿ’ನಲ್ಲಿ ಅರ್ಜಿ ಸಲ್ಲಿಸಿದರೆ, ಅವುಗಳಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದರು.

ವಿದ್ಯುತ್ ಕಂಬಗಳನ್ನು ಹತ್ತಲು ಸಾರ್ವಜನಿಕರಿಗೆ ಅನುಮತಿ ಇಲ್ಲ. ಮಳೆಗಾಲದಲ್ಲಿ ವಿದ್ಯುತ್ ಕಂಬಗಳಲ್ಲಿ ಗ್ರೌಂಡ್ ಆಗುತ್ತಿರುತ್ತದೆ. ಅದರಿಂದ ವಿದ್ಯುತ್ ಕಂಬಗಳಿಗೆ, ಸಾಕು ಪ್ರಾಣಿಗಳನ್ನು ಕಟ್ಟಬಾರದು. ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕಲ್ಲುದೊಡ್ಡಿಯಲ್ಲಿನ 16 ವರ್ಷಗಳ ಹಳೇ ವಿದ್ಯುತ್ ಕಂಬಗಳನ್ನು ಬದಲಿಸಲು ಅಂದಾಜುಪಟ್ಟಿ ತಯಾರಿಸುವಂತೆ ಸಹಾಯಕ ಎಂಜಿನಿಯರ್‌ಗೆ ಸೂಚಿಸಿದರು.

ಸಭೆಯಲ್ಲಿ ಗ್ರಾಹಕರಾದ ಸತೀಶ್ ಕಟೀಲ್, ಗುಣವತಿ, ನಿಂರಾಜು, ಮೆಸ್ಕಾಂ ಸಹಾಯಕ ಎಂಜಿನಿಯರ್ಸ್‌ಗಳಾದ ಕಿರಣ್‌ಕುಮಾರ್, ಅಭಿಷೇಕ್, ಶರಾಭಿ, ಲೆಕ್ಕಾಧಿಕಾರಿ ಸಂಸ್ಕೃತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT