ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್ ಕಾರ್ಡ್ ದುರುಪಯೋಗ: ₹25 ಲಕ್ಷ ದಂಡ

Published 18 ಆಗಸ್ಟ್ 2023, 6:01 IST
Last Updated 18 ಆಗಸ್ಟ್ 2023, 6:01 IST
ಅಕ್ಷರ ಗಾತ್ರ

ಕಡೂರು: ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ಉಚಿತ ಪಡಿತರ ಸೌಲಭ್ಯ ನೀಡುತ್ತಿದೆ. ಆದರೆ ಸುಳ್ಳು ಮಾಹಿತಿ ನೀಡಿ ಅರ್ಹತೆಯಿಲ್ಲದಿದ್ದರೂ ಬಿಪಿಎಲ್ ಪಡಿತರ ಕಾರ್ಡ್ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ತಾಲ್ಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿದೆ.

21-22 ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಂಡಿದ್ದಾರೆ. ಪ್ರಸ್ತುತ ತಾಲ್ಲೂಕಿನಲ್ಲಿ ಒಟ್ಟು 67406 ಬಿಪಿಎಲ್, 5433 ಅಂತ್ಯೋದಯ, 7583 ಎಪಿಎಲ್ ಹೀಗೆ ಒಟ್ಟು 80422 ಪಡಿತರ ಕಾರ್ಡುಗಳಿವೆ. ಇತ್ತೀಚೆಗೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ನಂತರ ನಾಲ್ಕು ಸಾವಿರ ಜನರ ಹೆಸರನ್ನು( ಮರಣ ಹೊಂದಿದವರು ಇತ್ಯಾದಿ) ಪಡಿತರ ಕಾರ್ಡಿನಿಂದ ತೆಗೆದುಹಾಕಲಾಗಿದೆ.

ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇಷ್ಟೆಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಈಗ ಇರುವ ಬಿಪಿಎಲ್ ಕಾರ್ಡುದಾರರಲ್ಲಿ ಬಹಳಷ್ಟು ಜನರ ಬಳಿ ಕಾರಿದೆ. ಜಮೀನಿದೆ.ಮನೆಯಲ್ಲಿ ಟ್ರಾಕ್ಟರ್ ಇಟ್ಟುಕೊಂಡಿದ್ದಾರೆ. ಆ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರೆ. ಅಡಿಕೆ- ತೆಂಗು ತೋಟವಿದೆ.ಕೆಲವರು ನಿವೃತ್ತರಿದ್ದಾರೆ.ನಿವೃತ್ತಿ ವೇತನವೂ ಬರುತ್ತಿದೆ...ಒಂದಿಷ್ಟು ಜನರು ತೆರಿಗೆ ಪಾವತಿದಾರರೂ ಇದ್ದಾರೆ. ಆದರೂ ಅವರಿಗೆ ಬಿಪಿಎಲ್ ಕಾರ್ಡ್ ಇದೆ!

ವಿತರಕರು ಎಷ್ಟು ಪಡಿತರ ಅಗತ್ಯವಿದೆ ಎಂಬ ವಿವರವನ್ನು ಇಲಾಖೆಗೆ ನೀಡುವ ಆಧಾರದ ಮೇಲೆ ಅವರಿಗೆ ಪಡಿತರ ಪೂರೈಕೆಯಾಗುತ್ತದೆ. ಪಡಿತರ ಬಿಡುಗಡೆಗೆ ಒಂದಿಷ್ಟು ಹಣವನ್ನೂ ಖರ್ಚುಮಾಡಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ಪಡಿತರ ವಿತರಕರೊಬ್ಬರು ಹೇಳುತ್ತಾರೆ. ಇನ್ನು ವರ್ಷಕೊಮ್ಮೆ ಪಡಿತರ ಅಂಗಡಿಯವರು ತಮ್ಮ ತೂಕದ ಯಂತ್ರಕ್ಕೆ ಪ್ರಮಾಣಿತ ಸೀಲ್ ಹಾಕಿಸಿಕೊಳ್ಳುವುದು ಕಡ್ಡಾಯ. ಅದಕ್ಕಾಗಿ ಸರ್ಕಾರ ಶುಲ್ಕ ನಿಗಧಿ ಮಾಡಿದೆ. ಆದರೆ ಇದಕ್ಕೆಂದೇ ₹1500 ನೀಡಬೇಕಿದೆ.  ಹಣ ಕೊಟ್ಟರೇ ತೂಕದ ಯಂತ್ರಕ್ಕೆ ಸೀಲ್ ಬೀಳುವುದು! ಇದು ಇಲ್ಲಿನ ಪರಿಸ್ಥಿತಿ.

ಸರ್ಕಾರಿ ಮಾನದಂಡದ ಅನ್ವಯ ತಾಲ್ಲೂಕಿನಾದ್ಯಂತ ತಪ್ಪು ಮಾಹಿತಿ ನೀಡಿದವರಿಂದ ಒಟ್ಟು ₹25 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಒಂದು ಕೆ.ಜಿ.ಪಡಿತರಕ್ಕೆ ₹22ರಂತೆ ದಂಡ ವಸೂಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT