ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಗುಣಮಟ್ಟದ ಶಿಕ್ಷಣವೇ ಇಲ್ಲಿನ ಆದ್ಯತೆ

Published 7 ಮೇ 2024, 6:02 IST
Last Updated 7 ಮೇ 2024, 6:02 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನ ಮೆಣಸೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣದ ಮೂಲಕ ಗಮನ ಸೆಳೆಯುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

2007ರಲ್ಲಿ ಪ್ರಾರಂಭವಾದ ಈ ಕಾಲೇಜು 2013ರ ನಂತರ ಮೆಣಸೆಯಲ್ಲಿ ಸ್ವಂತ ಕಟ್ಟಡ ಹೊಂದಿದೆ. ಆರಂಭದಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎಂ ಪದವಿ ವಿಭಾಗ ಇತ್ತು. ಈಗ ಬಿ.ಬಿ.ಎ ಮತ್ತು  ಬಿ.ಸಿ.ಎ ವಿಭಾಗಗಳನ್ನೂ ಹೊಂದಿದೆ. ಕಾಲೇಜು ಆವರಣ 4 ಎಕರೆಯಷ್ಟಿದ್ದು, ಸುಸಜ್ಜಿತ ಗ್ರಂಥಾಲಯ, ಕ್ರೀಡಾಂಗಣ, ಕಂಪ್ಯೂಟರ್ ಲ್ಯಾಬ್ ಸೌಲಭ್ಯ, ಐ.ಸಿ.ಟಿ ಸೌಲಭ್ಯವಿರುವ ತರಗತಿಗಳು, ಅನುಭವಿ ಅಧ್ಯಾಪಕ ವೃಂದ, ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್‌ ಜತೆಗೆ  ಶಾರದಾ ಪೀಠದಿಂದ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವೂ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಇದೆ.

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು 13 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಸ್ಮಾರ್ಟ್ ಕೊಠಡಿ, ಎನ್‍ಎಸ್‍ಎಸ್ ಘಟಕ, ರೆಡ್ ಕ್ರಾಸ್, ಮಹಿಳಾ ವೇದಿಕೆ, ಆಪ್ತ ಸಲಹಾ ಸಮಿತಿ, ಸಿಸಿ ಕ್ಯಾಮೆರಾ ಸೌಲಭ್ಯ ಇರುವ ಈ ಕಾಲೇಜಿಗೆ ನ್ಯಾಕ್‍ನಿಂದ ಬಿ ಶ್ರೇಣಿ ಮಾನ್ಯತೆ ಲಭಿಸಿದೆ.

ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಇತರ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಸೌಲಭ್ಯವಿದೆ. ಕಾಲೇಜಿನಲ್ಲಿ 10 ಕಾಯಂ ಉಪನ್ಯಾಸಕರು, 10 ಅತಿಥಿ ಉಪನ್ಯಾಸಕರಿದ್ದಾರೆ. ಕಾಲೇಜಿನಲ್ಲಿ 22 ಕೊಠಡಿಗಳಿದ್ದು, 372 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2022-23ನೇ ಸಾಲಿಗೆ ಹೋಲಿಸಿದರೆ ಈ ಬಾರಿ ದಾಖಲಾತಿ ಹೆಚ್ಚಾಗಿದೆ.

ಕಾಲೇಜಿಗೆ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಆಟದ ಮೈದಾನ, ಹೆಚ್ಚುವರಿ ಶೌಚಾಲಯ, ಪ್ರತ್ಯೇಕ ಸಭಾಂಗಣ, ಹೆಚ್ಚುವರಿ ಕೊಳವೆ ಬಾವಿ ಮತ್ತು  ಕಾಲೇಜಿಗೆ ಆವರಣಗೋಡೆಯ ಅಗತ್ಯವಿದೆ. ಇಬ್ಬರು ಕನ್ನಡ ಉಪನ್ಯಾಸಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆ, ಕಚೇರಿ ಅಧೀಕ್ಷಕರು, ದ್ವೀತಿಯ ದರ್ಜೆ ಸಹಾಯಕರ ಹುದ್ದೆ, ಕಾಯಂ ಗ್ರಂಥಪಾಲಕರ ಹುದ್ದೆ, ಕಚೇರಿ ಸಹಾಯಕರು ಹುದ್ದೆ ಖಾಲಿಯಿದೆ. 

ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಆರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9449053028, 9480001206, 9480347167, 9481860922ಸಂರ್ಕಿಸಬಹುದು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ. ಕಂಪ್ಯೂಟರ್ ಲ್ಯಾಬ್ ಮತ್ತು ಹೆಚ್ಚುವರಿ ತರಗತಿ ಕೊಠಡಿಗಾಗಿ ಸರ್ಕಾರದಿಂದ ₹1.50 ಕೋಟಿ ಅನುದಾನ ಬಿಡುಗಡೆಯಾಗಿದೆ
ಭಾರತಿ ಕಾಲೇಜಿನ ಪ್ರಾಂಶುಪಾಲೆ
ಕಾಲೇಜಿಗೆ ಸುಸಜ್ಜಿತ ರಸ್ತೆ ವಾಹನ ನಿಲುಗಡೆ ಪ್ರದೇಶ ಕಂಪ್ಯೂಟರ್ ಲ್ಯಾಬ್ ಹೆಚ್ಚುವರಿ ಕೊಠಡಿ ನಿರ್ಮಿಸಲಾಗಿದೆ. ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು
ಟಿ.ಡಿ ರಾಜೇಗೌಡ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT