ಕಾಫಿನಾಡಿನಲ್ಲಿ ವರುಣನ ಆರ್ಭಟ

7

ಕಾಫಿನಾಡಿನಲ್ಲಿ ವರುಣನ ಆರ್ಭಟ

Published:
Updated:
Deccan Herald

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಹದ ಮಳೆಯಾಗಿದೆ.

ಮಳೆಗಾಳಿಗೆ ಕೆಲವೆಡೆ ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಕೆಲವೆಡೆಗ ಮನೆಗಳ ಗೋಡೆಗಳು ಕುಸಿದು ಹಾನಿ ಉಂಟಾಗಿದೆ. ನಗರದ ಪೆನ್ಷನ್‌ ಮೊಹಲ್ಲಾದ ಗಾಯತ್ರಿ ಅವರ ಮನೆ ಗೋಡೆ ಕುಸಿದಿದೆ. ಹಂಪಾಪುರದಲ್ಲಿ ರುಕ್ಮಿಣಿ ಮತ್ತು ಜಯಮ್ಮ ಅವರ ಮನೆಯ ಗೋಡೆಗಳು ಬಿದ್ದು ಮನೆಯಲ್ಲಿದ್ದ ವಸ್ತುಗಳಿಗ ಹಾನಿಯಾಗಿದೆ. ಬಿಟ್ಟುಬಿಟ್ಟು ನಿರಂತರವಾಗಿ ಮಳೆಯಾಗುತ್ತಿದೆ. ಕೆಲವೊಮ್ಮೆ ಜೋರಾಗಿ ಮತ್ತೆ ಕೆಲವೊಮ್ಮೆ ತುಂತುರು ಸುರಿಯುತ್ತಿದೆ.

ಗಿರಿಶ್ರೇಣಿ ಮಾರ್ಗದಲ್ಲಿ ಸುಮಾರು 30, ಮಲ್ಲೇನಹಳ್ಳಿ ಮತ್ತು ಮಲ್ಲಂದೂರು ವ್ಯಾಪ್ತಿಯಲ್ಲಿ 20 ಒಟ್ಟಾರೆ ತಾಲ್ಲೂಕಿನಲ್ಲಿ ಸುಮಾರು 83 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಹೊಸ ಕಂಬಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಮೆಸ್ಕಾಂ ಎಂಜಿನಿಯರ್‌ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಿರಿಶ್ರೇಣಿ ಮಾರ್ಗದಲ್ಲಿ ಕೆಲವು ಕಡೆ ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿವೆ. ರಸ್ತೆ ಬದಿಯ ಚರಂಡಿಗಳಲ್ಲಿ ಮಣ್ಣು, ಕಸಕಡ್ಡಿ ತುಂಬಿಕೊಂಡಿದೆ. ರಸ್ತೆಯಲ್ಲಿ ನೀರು ಹರಿಯುತ್ತದೆ. ಕೆಲವು ಕಡೆ ರಸ್ತೆ ಕೊರಕಲಾಗಿದೆ. ಮತ್ತೆ ಕೆಲವು ಕಡೆ ಗುಂಡಿಗಳಾಗಿವೆ. ನಗರದಲ್ಲಿ ಮಣ್ಣು ರಸ್ತೆಗಳಿರುವ ಬಡಾವಣೆಗಳಲ್ಲಿ ಸಂಚಾರ ತಲೆನೋವಾಗಿ ಪರಿಣಮಿಸಿದೆ. ರಸ್ತೆಗಳು ಕೆಸರುಮಯವಾಗಿವೆ.

ತುಂಗಾ, ಭದ್ರಾ ಮತ್ತುಹೇಮಾವತಿ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಹಳ್ಳಕೊಳ್ಳಗಳು, ಜಲಪಾತಗಳು ಮೈದುಂಬಿಕೊಂಡಿವೆ. ಕಡೂರು ತಾಲ್ಲೂಕಿನ ಅಯ್ಯನಕೆರೆ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಮಲೆನಾಡು ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ.

ಚಿಕ್ಕಮಗಳೂರು– 37.1, ಬ್ಯಾರವಳ್ಳಿ–90, ಅತ್ತಿಗುಂಡಿ– 82, ಸಿಂಗಟಗೆರೆ 22, ಕಮ್ಮರಡಿ– 207, ಕೊಪ್ಪ–181, ಜಯಪುರ–158, ಬಸರಿಕಟ್ಟೆ–166, ಕಳಸ–170, ಗೋಣಿಬೀಡು–160, ಬಾಳೆಹೊನ್ಊರು–100, ಕೆರೆಕಟ್ಟೆ–300, ಕಿಗ್ಗಾ–243, ಶೃಂಗೇರಿ–152, ರಂಗೇನಹಳ್ಳಿ–39, ತರೀಕೆರೆ– 33, ಶಿವನಿ–12 ಮಿ.ಮೀ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !