ಜೇಸಿ ಸಂಸ್ಥೆಯಿಂದ ಕಲ್ಮಕ್ಕಿ ಶಾಲೆ ದತ್ತು

7

ಜೇಸಿ ಸಂಸ್ಥೆಯಿಂದ ಕಲ್ಮಕ್ಕಿ ಶಾಲೆ ದತ್ತು

Published:
Updated:
Deccan Herald

‌ಕಳಸ: ‘ಜನಮಾನಸದಲ್ಲಿ ಉಳಿಯುವಂತಹ ಬದಲಾವಣೆ ತರುವುದೇ ಸಮಾಜಸೇವಾ ಸಂಸ್ಥೆಗಳ ಆದ್ಯತೆ ಆಗಬೇಕು’ ಎಂದು ಜೇಸಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಮೇಘಾನಂದ ಜಾನಿ ಅಭಿಪ್ರಾಯಪಟ್ಟರು.

ಕಲ್ಮಕ್ಕಿ ಸರ್ಕಾರಿ ಶಾಲೆಯನ್ನು ಜೇಸಿ ಸಂಸ್ಥೆ ದತ್ತು ಪಡೆದುಕೊಂಡು ಶಾಲೆಗೆ ಅಗತ್ಯ ಪರಿಕರ ವಿತರಿಸಿದ ನಂತರ ಆಶೀರ್ವಾದ್ ಕಂಫರ್ಟ್ಸ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜೇಸಿ ವಲಯ 15ರ ಅಧ್ಯಕ್ಷ ವಿಕಾಸ್ ಗೂಗ್ಲಿಯಾ ಮಾತನಾಡಿ, ಜೇಸಿ ಸಂಸ್ಥೆಯು ಭಾರತದಲ್ಲಿ ಪರಿಸರ, ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸೇವೆಯಲ್ಲಿ ತೊಡಗಿದೆ ಎಂದರು.

ಕಳಸ ಜೇಸಿ ಸಂಸ್ಥೆ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ಸಂಸ್ಥೆಯು ಕಲ್ಮಕ್ಕಿ ಶಾಲೆಗೆ ₹15 ಸಾವಿರ ವೆಚ್ಚದಲ್ಲಿ ನಾಮಫಲಕ, ಅಲ್ಮೇರಾ, ಹಸಿರು ಬೋರ್ಡ್ ಮತ್ತು ಅಂಬೇಡ್ಕರ್ ವಸತಿ ಶಾಲೆಗೆ ₹30 ಸಾವಿರ ವೆಚ್ಚದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದೆ ಎಂದರು.

ಜೇಸಿ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಮಿಸ್ಕಿತ್, ವಲಯ ಉಪಾಧ್ಯಕ್ಷೆ ಸಮತಾ ಮಿಸ್ಕಿತ್, ವಲಯಾಧಿಕಾರಿಗಳಾದ ಶ್ರೇಣಿಕ್ ಜೈನ್, ಯೋಗೀಶ್, ಕಳಸ ಜೇಸಿ ಪದಾಧಿಕಾರಿಗಳಾದ ಜಗದೀಶ್ ನಾಯಕ್, ಮಹೇಶ್, ಸುರೇಂದ್ರ, ರಾಮಪ್ರಕಾಶ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !