ಸೀಗೋಡು(ಬಾಳೆಹೊನ್ನೂರು): ಶಾಲೆಯ ಅಭಿವೃದ್ಧಿಗೆ ಗ್ರಾಮದ ಹಲವರು ₹3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಸೀಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಕೆ.ಎಸ್. ಬಾಗ್ಯಜ್ಯೊತಿ ತಿಳಿಸಿದರು.

ಸೀಗೋಡು ಎಸ್ಟೇಟ್ ಮಾಲೀಕ ಎಚ್.ಬಿ. ಸುದರ್ಶನ್ ಶಾಲೆಯ ಕೊಠಡಿಗಳಿಗೆ ಸುಣ್–ಬಣ್ಣ, ಕಚೇರಿಗೆ ಖುರ್ಚಿ, ಟೇಬಲ್, ಮಕ್ಕಳಿಗೆ ಬ್ಯಾಗ್, ಎಲ್ಲಾ ಕೊಠಡಿಗಳಿಗೂ ಗ್ರೀನ್ ಭೋರ್ಡ, ಬ್ಲೂಟೂತ್ ಸ್ಪೀಕರ್ ಸೇರಿದಂತೆ ಸುಮಾರು ₹2 ಲಕ್ಷಕ್ಕೂ ಅಧಿಕ ಮೌಲ್ಯದ ಕೊಡುಗೆ ನೀಡಿದ್ದು, ಶಿಥಿಲಗೊಂಡಿರುವ ಎರಡು ಕೊಠಡಿ ಹಾಗೂ ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ’ ಎಂದರು.

1ರಿಂದ 7ತರಗತಿಯ 51 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವ ಶಾಲೆಯಲ್ಲಿ, ಪ್ರಸ್ತುತ ನಾಲ್ಕು ಜನ ಶಿಕ್ಷಕರಿದ್ದಾರೆ. ಕೌಶಿಕ್ ಪಟೇಲ್ ಸಿಸಿ ಟಿ.ವಿ ಕ್ಯಾಮೆರಾ, ನಗು ಫೌಂಡೇಷನ್ ವತಿಯಿಂದ ಸಣ್ಣ ಪ್ರೋಜೆಕ್ಟರ್ ಮತ್ತು ಪರದೆ, ಶ್ರೀಕಾಂತ್ ಅವರಿಂದ ಗಾರ್ಡನ್ಗಳಿಗೆ ಕಂಬ, ರಂಗಪ್ಪಗೌಡ ಕಾರಗದ್ದೆ, ಕೇಶವಗೌಡ, ಮೇಲಿನ ಪಾಲ್ ಎಸ್ಟೇಟ್ ಅರವಿಂದ್, ಬಾಳೆಹೊನ್ನೂರು ರೋಟರಿ ಕ್ಲಬ್, ಕುಂದೂರು ಪ್ರಕಾಶ್ ಸೇರಿದಂತೆ ಹಲವರು ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಪ್ರತಿ ವಿದ್ಯಾರ್ಥಿ ತಮ್ಮ ಜನ್ಮ ದಿನದಂದು ಒಂದು ಗಿಡ ನೆಟ್ಟು ಪೋಷಿಸುತ್ತಿದ್ದು, ಶಾಲೆಯಲ್ಲಿ ಹೊಸ ಪರಿಸರ ವಾತಾವರಣ ಸೃಷ್ಟಿಸಿದೆ. ಶಾಲೆಯಲ್ಲಿ ಕಂಪ್ಯೂಟರ್ಗಳಿದ್ದು, ಇಕೋ ಕ್ಲಬ್ ಕೂಡ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಕ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.