ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಎಂ.ಪಿ.ಕುಮಾರಸ್ವಾಮಿ ಮನೆ ಮುಂದೆ ಅಹೋರಾತ್ರಿ ಧರಣಿ

ರೈತ ಸಂಘ: ರಸ್ತೆ ದುರಸ್ತಿಗೆ ಆಗ್ರಹ
Last Updated 21 ಅಕ್ಟೋಬರ್ 2022, 6:15 IST
ಅಕ್ಷರ ಗಾತ್ರ

ಮೂಡಿಗೆರೆ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಹಾಗೂ ನಮ್ಮ ರಸ್ತೆ ನಮ್ಮ ಹಕ್ಕು ಗ್ರೂಪ್ ವತಿಯಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮನೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರದಿಂದ ಪ್ರಾರಂಭಿಸಲಾಗಿದೆ.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, '13 ವರ್ಷದಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ರಸ್ತೆ ದುರಸ್ತಿ ಕಾಣದೇ ಗುಂಡಿ ಗೊಚ್ಚೆಯಲ್ಲಿ ತಿರುಗಾಡುವಂತಾಗಿದೆ. ಗ್ರಾಮದ ಜನರು, ರೋಗಿಗಳು ಹಾಗೂ ವಿದ್ಯಾರ್ಥಿಗಳು ಕಳೆದ 13 ವರ್ಷದಿಂದ ರಸ್ತೆ ದುರಸ್ತಿ ಕಾಣದೇ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಶಾಸಕರ ಗಮನಕ್ಕೆ ತಂದರೂ ತಲೆ ಕೆಡಿಸಿಕೊಂಡಿಲ್ಲ’ ಎಂದು ದೂರಿದರು.

'ಈ ರಸ್ತೆ ದುರಸ್ತಿಗಾಗಿ 5 ಗ್ರಾಮದ ಜನರು ನಮ್ಮ ರಸ್ತೆ ನಮ್ಮ ಹಕ್ಕು ಎಂಬ ಗ್ರೂಪ್ ಮಾಡಿಕೊಂಡು ಈ ಹಿಂದೆ ಚಳುವಳಿ ಪ್ರಾರಂಭಿಸಲಾಯಿತು. ನಂತರ ಚಿಕ್ಕಮಗಳೂರು ಆಜಾದ್ ಪಾರ್ಕ್‍ನಲ್ಲಿ ಚಳುವಳಿ ನಡೆಸಿದೆವು. ಅಲ್ಲಿ ಶಾಸಕರು ಕೂಡಲೇ ಗುದ್ದಲಿ ಪೂಜೆ ನೆರವೇರಿಸಿ ಆ.17ರೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು' ಎಂದು ಭರವಸೆ ನೀಡಿದ್ದರು. ಆದರೆ 3 ದಿನ ಕಳೆದರೂ ಕಾಮಗಾರಿ ಪ್ರಾರಂಭಿಸಲಿಲ್ಲ. ಈ ಬಗ್ಗೆ ಶಾಸಕರು ಪಾರದರ್ಶಕವಾದ ಉತ್ತರ ನೀಡುವವರೆಗೂ ಅಹೋರಾತ್ರಿ ಧರಣೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ ದುರಸ್ತಿಪಡಿಸುವ ಅನುದಾನ ಮೀಸಲಿರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಆ.21ರಂದು ನಡೆಯಲಿದೆ. ರಸ್ತೆ ಶೀಘ್ರವೇ ದುರಸ್ತಿಪಡಿಸಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಜಗ್ಗದೇ ಶಾಸಕರೇ ಸ್ಥಳಕ್ಕೆ ಬರಬೇಕೆಂದು ಧರಣಿ ಮುಂದುವರೆಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ರಾಜ್ಯ ಸಮಿತಿ ಸದಸ್ಯ ಪರ್ವತೇಗೌಡ, ಸಾಮಾಜಿಕ ಹೋರಾಟಗಾರ ಎಚ್.ಪೃಥ್ವಿರಾಜ್, ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT