ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ತ್ವರಿತಕ್ಕೆ ಸೂಚನೆ

7
ಭದ್ರಾ ಮೇಲ್ದಂಡೆ ಯೋಜನಾ ಕಚೇರಿಗೆ ಸಚಿವ ಭೇಟಿ

ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ತ್ವರಿತಕ್ಕೆ ಸೂಚನೆ

Published:
Updated:
Deccan Herald

ಅಜ್ಜಂಪುರ: ಚಿತ್ರದುರ್ಗ- ತುಮಕೂರು ಜಿಲ್ಲೆಗಳಿಗೆ ಭದ್ರಾ ನೀರು ಹರಿಯುವ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಚಿತ್ರದುರ್ಗ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ಎಂಜಿನಿಯರ್ ಜತೆ ಚರ್ಚಿಸಿದರು. ಯೋಜನೆಗೆ ಹಣಕಾಸಿನ ಕೊರತೆ ಇಲ್ಲ. ಕಾಮಗಾರಿ ಕೆಲಸ ಶೀಘ್ರ ಪೂರ್ಣಗೊಳ್ಳಬೇಕು. ಇದೇ ವರ್ಷದ ಕೊನೆಯೊಳಗೆ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಯಬೇಕು. ಈ ನಿಟ್ಟಿನಲ್ಲಿ ಕಾಮಗಾರಿ ವೇಗ ಹೆಚ್ಚಿಸುವಂತೆ ಸಚಿವರು ಸೂಚಿಸಿದರು.

ಸಂಸದ ಬಿ.ಎನ್.ಚಂದ್ರಪ್ಪ, ‘ಭದ್ರಾ ಜಲಾಶಯ ಇರೋ ತರೀಕೆರೆ ತಾಲ್ಲೂಕಿನ ನೀರು ತುಂಬಿಸುವ ಕೆಲಸವೂ ಆಗಲಿ. ಜತೆಜತೆಗೆ ಚಿತ್ರದುರ್ಗ ಕಡೆಯ ಭಾಗಗಳಿಗೆ ಭದ್ರೆಯ ನೀರು ಹರಿಸೋ ಕಾಮಗಾರಿಯೂ ಪೂರ್ಣಗೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ಗೂಳಿಹಟ್ಟಿ ಶೇಖರ್, ರಘುಮೂರ್ತಿ, ಮಾಜಿ ಶಾಸಕ ಸುಧಾಕರ್ ಇದ್ದರು. ಪಾವಗಡ ಮತ್ತು ಹಿರಿಯೂರು ಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ಅಜ್ಜಂಪುರ ವಿಭಾಗದ ಎಂಜಿನಿಯರ್ ಮಂಜುನಾಥ ದೇಸಾಯಿ, ಪಾಳೇಗಾರ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !