ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್-– ಬಿಜೆಪಿ ಕಾರ್ಯಕರ್ತರ ವಾಗ್ವಾದ

Last Updated 24 ಜೂನ್ 2017, 9:26 IST
ಅಕ್ಷರ ಗಾತ್ರ

ಹೇರೂರು(ಬಾಳೆಹೊನ್ನೂರು): ಸೈಕಲ್ ವಿತರಣೆ ಕಾರ್ಯಕ್ರಮ ಹಾಗೂ ಪೋಷಕರ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು ಶಾಲೆ ಎಂಬುದನ್ನು ಮರೆತು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗುವ ಮೂಲಕ ಗದ್ದಲ ಎಬ್ಬಿಸಿದ ಘಟನೆ ಈಚೆಗೆ ನಡೆದಿದೆ.

ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸೈಕಲ್ ವಿತರಣೆ ಹಾಗೂ ಪೋಷಕರ ಸಭೆ ಆಯೋಜಿಸಲಾಗಿತ್ತು. ಸರ್ಕಾರದ ಸುತ್ತೋಲೆಯಂತೆ ಶಾಲಾಭಿ ವೃದ್ಧಿ ಸಮಿತಿಯ ಅಧ್ಯಕ್ಷರು ಪೋಷಕರೇ ಆಗಿರಬೇಕು ಹಾಗೂ ಸರ್ಕಾರಿ ನಿಯಮದಂತೆ ಸಮಿತಿ ರಚನೆಯಾಗಬೇಕು ಎಂಬ ವಿಷಯದ ಕುರಿತು ಚರ್ಚೆಯ  ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ವಾಗ್ವಾದದಲ್ಲಿ ತೊಡಗಿದರು.

ಹಿಂದಿನ ಬಾರಿ ಪೋಷಕರಲ್ಲದವ ರೊಬ್ಬರು ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದು ಹೇಗೆ? ಕಳೆದ ವರ್ಷ ನಡೆದ ಸಾರ್ವಜನಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಏಕೆ ಕಳುಹಿಸಲಿಲ್ಲ? ಎಂಬ ಆರೋಪಗಳ ಕುರಿತು ಎರಡೂ ಪಕ್ಷಕಗಳ ಮುಖಂಡರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದರು.

ಇದೇ ವೇಳೆ  ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಪೋಷಕರ ಸಭೆಯಲ್ಲೇ ನೂತನ ಶಾಲಾಭಿವೃದ್ಧಿ ಮಂಡಳಿ ರಚನೆ ನಡೆಸಬೇಕೆಂದು ಪಟ್ಟು ಹಿಡಿದು ನೂತನ ಅಧ್ಯಕ್ಷರನ್ನಾಗಿ ರಘು ಎಂಬುವವರನ್ನು ಆಯ್ಕೆ ಮಾಡಿ, ಉಳಿದ ಕೆಲವು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದವ ರನ್ನು ಸೂಚಿಸಿದರು. ಈ ಪ್ರಕ್ರಿಯೆಯನ್ನು ಬಿಜೆಪಿ ಮುಖಂಡರು ವಿರೋಧಿಸಿದರು.ಪೋಷಕ ರವಿ ಕುಲಾಲ್ ಮಾತ ನಾಡಿ, ಪೋಷಕರ ಸಭೆ ನಡೆಯುತ್ತಿರು ವಾಗ ಅನಗತ್ಯವಾಗಿ ರಾಜಕೀಯ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉದಯ್ ಮಾತನಾಡಿ, ‘ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಖಾಸಗಿ ಕಾರ್ಯ ಕ್ರಮಕ್ಕೆ ಮಕ್ಕಳನ್ನು ಕಳುಹಿಸುವಂತಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಕೀಯ ನಡೆದಿಲ್ಲ’ ಎಂದರು.

ಶಾಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಚರ್ಚೆ ನಡೆಸದೆ  ಮಕ್ಕಳ ಎದುರು ಪಕ್ಷಗಳ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಕ್ಕೆ ಪೋಷಕರು  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉದಯ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ವಿ.ಜಯಂತ್, ಗ್ರಾಮ ಪಂಚಾ ಯಿತಿ ಸದಸ್ಯ ಸಂದರ್ಶ್, ಅಮ್ಜದ್, ಮಾಲಿನಿ, ಸುರೇಂದ್ರ, ರಹೀಂ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT