ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸುರಕ್ಷತಾ ಅಧಿಕಾರಿ ಎಸಿಬಿ ಬಲೆಗೆ

Last Updated 28 ಅಕ್ಟೋಬರ್ 2021, 15:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಪ್ರಭಾರ ಆಹಾರ ಸುರಕ್ಷತಾ ಅಧಿಕಾರಿ ಡಾ.ತುಳಸಿ ರಂಗನಾಥ್‌ ಬೇಕರಿ ಮಾಲೀಕರೊಬ್ಬರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲಂಚವಾಗಿ ಪಡೆದಿದ್ದ ₹ 8 ಸಾವಿರ ನಗದು ಹಾಗೂ ಕೆಲ ಕಡತಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಳಸಿ ರಂಗನಾಥ್‌ ಅವರು ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೊಳಲ್ಕೆರೆ ರಸ್ತೆ ಹಾಗೂ ಜೆಎಂಐಟಿ ಮುಂಭಾಗದಲ್ಲಿ ಮಂಜುನಾಥ್‌ ಎಂಬುವರು ಬೇಕರಿ ನಡೆಸುತ್ತಿದ್ದಾರೆ. ಈ ಬೇಕರಿ ಮೇಲೆ ದಾಳಿ ನಡೆಸಿದ ತುಳಸಿ ರಂಗನಾಥ್‌ ಆಹಾರ ಸುರಕ್ಷತಾ ನಿಯಮದಡಿ ಪರವಾನಗಿ ಪಡೆದಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಂಡದ ರೂಪದಲ್ಲಿ ₹ 80 ಸಾವಿರ ಪಾವಿತಿಸಿ ಪರವಾನಗಿ ಪಡೆಯುವಂತೆ ತಾಕೀತು ಮಾಡಿದ್ದರು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ದಂಡ ವಿನಾಯಿತಿ ನೀಡಲು ಅಂಗಡಿ ಮಾಲೀಕರಿಗೆ ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಮಂಜುನಾಥ್‌ ಎಸಿಬಿಗೆ ದೂರು ನೀಡಿದ್ದರು. ಗುರುವಾರ ಮನೆಯಲ್ಲಿಯೇ ₹ 8 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT