ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಮಾವು, ಬಾಳೆ ಬೆಳೆ ಸುಧಾರಿತ ಬೇಸಾಯ ತರಬೇತಿ 15ರಂದು

Published 11 ಫೆಬ್ರುವರಿ 2024, 14:18 IST
Last Updated 11 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ ಫೆ.15ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ರೈತರಿಗೆ ಮಾವು ಮತ್ತು ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ತರಬೇತಿ ಶಿಬಿರದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಮಹಂತೇಶ್ ಅವರು ಸುಧಾರಿತ ಬೇಸಾಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡಿಸುವರು. ತಾಲ್ಲೂಕಿನ ಭೀಮನಬಂಡೆ ಸಮೀಪದ ಪ್ರಗತಿಪರ ರೈತ ಬಿ.ಶಿವಮೂರ್ತಿ ಮಾವಿನ ಬೆಳೆಯಲ್ಲಿನ ಯಶಸ್ಸಿನ ಅನುಭವಗಳನ್ನು ರೈತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಕೆರೆಯಾಗಳಹಳ್ಳಿಯ ಪ್ರಗತಿಪರ ರೈತ ಕೆ.ಎಸ್. ರಾಮಸ್ವಾಮಿ, ಬಾಳೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುವರು.

ತರಬೇತಿಯಲ್ಲಿ 50 ರೈತರು ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತ ರೈತರು ಸಹಾಯಕ ಕೃಷಿ ನಿರ್ದೇಶಕರಾದ ಆರ್. ರಜನೀಕಾಂತ್ (8277931058), ಉಷಾರಾಣಿ (9980730696), ಕೃಷಿ ಅಧಿಕಾರಿಗಳಾದ ಟಿ.ಪಿ. ರಂಜಿತಾ (8277930959), ಸಿಕಂದರ್ ಬಾಷಾ (8277931028) ಅಥವಾ ಎಂ.ಜೆ.ಪವಿತ್ರಾ (9535412286) ಅವರಿಗೆ ಕರೆ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT