ಚಂಪಾಗೆ ಚಿತ್ರದುರ್ಗ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

ಸೋಮವಾರ, ಮೇ 27, 2019
21 °C

ಚಂಪಾಗೆ ಚಿತ್ರದುರ್ಗ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

Published:
Updated:
Prajavani

ಚಿತ್ರದುರ್ಗ: ಇಲ್ಲಿನ ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಬಸವ ಜಯಂತಿಯ ಅಂಗವಾಗಿ ಮೇ 7ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

‘ಸಾಹಿತ್ಯ ಕ್ಷೇತ್ರಕ್ಕೆ ಚಂಪಾ ಅವರು ನೀಡಿದ ಕೊಡುಗೆ ಅನನ್ಯ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ವೈಚಾರಿಕತೆಗೆ ಒತ್ತಾಸೆಯಾಗಿ ನಿಂತು ಚಳವಳಿ ರೂಪಿಸಿದ್ದಾರೆ. ಹಾಸ್ಯ, ವಿಡಂಬನೆ, ನೇರ– ನಿಷ್ಠುರ ನಡೆಗೆ ಮಾದರಿಯಾಗಿದ್ದಾರೆ. 2018ನೇ ಸಾಲಿನ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದ್ದು ಮಠಕ್ಕೂ ಸಂತಸ ತಂದಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !