ತರಬೇತಿ ಪಡೆದು ವೃತ್ತಿ ಆರಂಭಿಸಿ

7

ತರಬೇತಿ ಪಡೆದು ವೃತ್ತಿ ಆರಂಭಿಸಿ

Published:
Updated:

ಚಿತ್ರದುರ್ಗ: ಮಹಿಳೆಯರು ಸುಂದರವಾಗಿ ಕಾಣಲು ಬ್ಯೂಟಿಪಾರ್ಲರ್‌ಗಳೇ ಕಾರಣ. ಈ ಹಿನ್ನಲೆಯಲ್ಲಿ ಆಸಕ್ತರು ಕನಿಷ್ಠ 2 ವರ್ಷ ತರಬೇತಿ ಪಡೆದ ನಂತರವೇ ವೃತ್ತಿ ಆರಂಭಿಸಲು ಮುಂದಾಗುವುದು ಸೂಕ್ತ ಎಂದು ಜಿಲ್ಲಾ ಯತ್ನಿಕ್ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ಪಿ. ವೀಣಾ ರಾವ್ ತಿಳಿಸಿದರು.

ಮೈಸೂರಿನಲ್ಲಿ ಈಚೆಗೆ ಒಂದು ಕಹಿಘಟನೆ ನಡೆದಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಬ್ಯೂಟಿಪಾರ್ಲರ್‌ಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಸಂಶಯದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದ್ದರಿಂದ ಇದು ಮರುಕಳಿಸದಂತೆ ಕಡಿವಾಣ ಹಾಕಲು ವೃತ್ತಿ ಕೌಶಲ ಹೊಂದುವುದು ಅಗತ್ಯ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್. ಸರಸ್ಪತಿ ಮಾತನಾಡಿ, ಬಹುತೇಕ ನೋಂದಾಯಿತ ಬ್ಯೂಟಿಪಾರ್ಲರ್‌ಗಳಲ್ಲಿ ಪ್ರಮಾಣಿಕೃತ, ಗುಣಮಟ್ಟದಿಂದ ಕೂಡಿದ ಸೌಂದರ್ಯವರ್ಧಕ ಸಾಮಗ್ರಿ ಖರೀದಿಸಿ ಮೇಕಪ್ ಮಾಡುತ್ತಿದ್ದೇವೆ. ಕೆಲವರು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಬಳಸಿ ಮೇಕಪ್ ಮಾಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಎಂ.ಎನ್. ಮಂಜುನಾಥ್ ಮಾತನಾಡಿ, ಸರ್ಕಾರ ಬ್ಯೂಟಿಪಾರ್ಲರ್‌ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಜತೆಗೆ ನೋಂದಾಯಿತ ಎಲ್ಲ ಬ್ಯೂಟಿಪಾರ್ಲರ್‌ಗಳ ಮಾಲೀಕರು ಒಗ್ಗಟ್ಟಿನಿಂದ ಇರಬೇಕು ಎಂದು ಕೋರಿದರು.

ನಿರ್ದೇಶಕರಾದ ಟಿ. ಜ್ಯೋತಿ, ಜಿ.ಸೌಮ್ಯಾ, ಎಸ್.ಲತಾ, ಆರ್.ವೀಣಾ, ವೆಂಕಟೇಶ್, ನೇತ್ರಾ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !