ಚಳ್ಳಕೆರೆ: ತಾಲ್ಲೂಕಿನ ₹49,000 ಹೆಕ್ಟೇರ್ ಶೇಂಗಾ ಬೆಳೆ ಬೆಳೆದಿದ್ದು, ಅದರಲ್ಲಿ ಎಷ್ಟು ನಷ್ಟ ಸಂಭವಿಸಿದೆ, ಎಷ್ಟು ರೈತರಿಗೆ ಬೆಳೆವಿಮೆ ಬರಬೇಕಿದೆ ಅದರ ಸಂಪೂರ್ಣ ಮಾಹಿತಿ ನೀಡುವಂತೆ ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಟಿ ರಮೇಶ್ ಅವರಿಗೆ ಸೂಚಿಸಿದರು.ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನಷ್ಟವಾಗಿರುವ ಬೆಳೆ ಮತ್ತು ಬೆಳೆ ವಿಮೆಗೆ ನೋಂದಾಯಿತ ರೈತರ ನಿರ್ದಿಷ್ಟ ಮಾಹಿತಿ ಕೊಡಿ ಅದನ್ನು ನಾನು ಸರ್ಕಾರಕ್ಕೆ ಸಲ್ಲಿಸಿ ಅದಷ್ಟು ಬೇಗ ಬೆಳೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ತಾಲ್ಲೂಕಿನಲ್ಲಿ ₹49,000 ಹೆಕ್ಟೇರ್ ಶೇಂಗಾ ಬೆಳೆಯಲ್ಲಿ ಶೇ 50 ರಷ್ಟು ಬೆಳೆ ನಷ್ಟವಾಗಿದೆ. ₹36,766 ರೈತರು ಮಾತ್ರ ಬೆಳೆ ವಿಮೆ ಕಟ್ಟಿದ್ದಾರೆ ಎಂದು ಶಾಸಕರ ಪ್ರಶ್ನೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಟಿ ರಮೇಶ್ ಉತ್ತರಿಸಿದರು.

ಸಭೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆ ಬರುತ್ತಿದೆ. ಈ ವರ್ಷದ ಫಲಿತಾಂಶದಲ್ಲಿ ಶೇ.100 ರಷ್ಟು ಫಲಿತಾಂಶ ಬರಬೇಕು. ಅತಿ ತುರ್ತಾಗಿ ಎಲ್ಲಾ ಮುಖ್ಯ ಶಿಕ್ಷಕರ ಸಭೆ ಕರೆದು ಮಾತನಾಡಿ ಎಂದರು. ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಶಾಲಾ,ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. 48 ಶಾಲೆಗಳಿಗೆ ದುರಸ್ಥಿ ಮಾಡಲು ₹1.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಿಕ್ಷಣ ಇಲಾಖೆ ಅನುದಾನ ಸದುಪಯೋಗ ಮಾಡಿಕೊಳ್ಳಿ ಎಂದು ಬಿಇಒ ಸುರೇಶ್ ಗೆ ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಸಿಡಿಪಿಓ ರಾಜನಾಯ್ಕ ಉತ್ತರಿಸಿ ₹88,949 ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ₹10,076 ಜನರ ವ್ಯತ್ಯಾಸ ಇದೆ. ಇದರಲ್ಲಿ ₹5,489 ಪಡಿತರ ಚೀಟಿದಾರರು ಪುರುಷರ ಮಾಲೀಕತ್ವದಲ್ಲಿವೆ. ₹3,232 ಫಲಾನುಭವಿಗಳು ತೆರಿಗೆದಾರರಾಗಿದ್ದಾರೆ. ₹2,040 ಫಲಾನುಭವಿಗಳು ಮರಣವಾಗಿರುವ ದಾಖಲೆ ಇವೆ. ಇದನ್ನು ಆಹಾರ ಇಲಾಖೆ ಅಧಿಕಾರಿಗಳು ಸರಿಪಡಿಸಿ ಕೊಳ್ಳಬೇಕಿದೆ ಎಂದು ತಿಳಿಸಿದರು.

ಪಂಚಾಯಿತಿ ಹಂತದಲ್ಲಿ ನಡೆಯುವ ರಸ್ತೆ, ಚರಂಡಿ ದುರಸ್ತಿ ಕಾಮಗಾರಿಗಳು ಗುಣಮಟ್ಟವಾಗಿ ನಡೆಯಬೇಕು. ಈಗಾಗಲೇ ಕೆಲ ಗ್ರಾಮಗಳಿಂದ ದೂರುಗಳು ಬಂದಿವೆ. ಇದಕ್ಕೆ ನೇರವಾಗಿ ಪಂಚಾಯತಿ ಅಧಿಕಾರಗಳನ್ನು ಹೊಣೆ ಮಾಡಲಾಗುವುದು ಎಂದು ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಶಾಸಕರು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್. ಶಶಿಧರ್, ನಗರಸಭೆ ಆಯುಕ್ತೆ ನಾಗವೇಣಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಡಿಪಿ ಸಮಿತಿ ಸದಸ್ಯರಾದ ಟಿ. ಚೌಳೂರು ಬಸಣ್ಣ, ನೇತ್ರಾವತಿ ಪಾಲಣ್ಣ, ಜಾಕೀರ್ ಹುಸೇನ್, ಎಂ. ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.