ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಡಿ.25ರಂದು ನಡೆದಿದ್ದ ಬಸ್ ದುರಂತದಲ್ಲಿ ಸುಟ್ಟು ಕರಕಲಾಗಿದ್ದ ಐವರ ಮೃತದೇಹಗಳ ಅವಶೇಷಗಳನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು.

ಬೆಂಗಳೂರಿನ ಬಿಂದು (28), ಅವರ ಮಗಳು ಗ್ರೇಯಾ (5), ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಎಚ್.ಸಿ.ಮಾನಸ (26), ಮಂಡ್ಯ ಜಿಲ್ಲೆ ಅಂಕನಹಳ್ಳಿಯ ಎ.ಎಂ.ನವ್ಯಾ (27), ಭಟ್ಕಳದ ರಶ್ಮಿ ಆರ್. ಮಹಾಲೆ (25) ಸಜೀವ ದಹನಗೊಂಡಿದ್ದರು. ದೇಹಗಳು ಗುರುತಿಸಲು ಅಸಾಧ್ಯವಾದ ರೀತಿಯಲ್ಲಿ ಕರಕಲಾಗಿದ್ದ ಕಾರಣ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಹುಬ್ಬಳ್ಳಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆದಿತ್ತು.

ಭಾನುವಾರ ಪರೀಕ್ಷಾ ವರದಿ ಕೈಸೇರಿದ್ದು, ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದ ಅವಶೇಷಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಮೃತದೇಹಗಳಲ್ಲಿ ಪತ್ತೆಯಾಗಿದ್ದ ಚೈನು, ಉಂಗುರ, ಬಳೆಗಳನ್ನೂ ಕುಟುಂಬ ಸದಸ್ಯರಿಗೆ ಪೊಲೀಸರು ನೀಡಿದರು.

‘ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಸ್ ಚಾಲಕ ರಫೀಕ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಕಂಟೇನರ್ ಚಾಲಕ ಕುಲದೀಪ್ ಯಾದವ್ ಮೃತದೇಹದ ಅವಶೇಷವನ್ನು ಹರಿಯಾಣದಿಂದ ಬಂದಿದ್ದ ಕುಟುಂಬ ಸದಸ್ಯರಿಗೆ ನೀಡಿದ್ದು, ಅವರು ಹಿರಿಯೂರಿನಲ್ಲೇ ಅಂತ್ಯಕ್ರಿಯೆನಡೆಸಿದ್ದಾರೆ’ ಎಂದು ತಿಳಿಸಿದರು.

ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದರು. ಸುಟ್ಟು ಕರಕಲಾಗಿದ್ದ ಮೃತದೇಹಗಳ ಅವಶೇಷ ಕಂಡು ಅವರ ಕುಟುಂಬ ಸದಸ್ಯರು ಆಸ್ಪತ್ರೆ ಆವರಣದಲ್ಲಿ ಕಣ್ಣೀರು ಹಾಕಿದರು.

‘ಯಾರಿಗೂ ಇಂತಹ ಸಾವು ಬರಬಾರದು. ಬಸ್ಗಳಲ್ಲಿ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರಶ್ಮಿ ಮಹಾಲೆ ಸಹೋದರ ವಿನಾಯಕ್ ಹೇಳಿದರು.

ಬಸ್ಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ; ಬೆಲ್ಲದ

ಹುಬ್ಬಳ್ಳಿ: ‘ವೋಲ್ವೊ ಬಸ್ಗಳು ಅಪಘಾತಕ್ಕೆ ಒಳಗಾದಾಗ ಕಿಟಕಿ ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆಯುವ ಬೆಂಕಿ ನಂದಕ ರಾಸಾಯನಿಕ ಸಿಂಪಡಣೆ ಆಗುವ ತಂತ್ರಜ್ಞಾನವನ್ನು ಬಸ್ಗಳಲ್ಲಿ ಅಳವಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರತಿ ಬಾರಿ ಅಪಘಾತವಾದ ಸಂದರ್ಭದಲ್ಲಿ ರಸ್ತೆ ಹಾಳಾಗಿರುವುದು ಚಾಲಕನ ಅಜಾಗರೂಕತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಬಸ್ಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.