ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ಗೆ ₹ 2 ಕೋಟಿ ಲಾಭ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಿ.ಸುಧಾಕರ್
Last Updated 22 ಅಕ್ಟೋಬರ್ 2020, 14:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ 2019-20ನೇ ಆರ್ಥಿಕ ವರ್ಷದಲ್ಲಿ ₹2.67 ಕೋಟಿ ಲಾಭ ಗಳಿಸಿದೆ ಎಂದು ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಡಿ.ಸುಧಾಕರ್ ತಿಳಿಸಿದರು.

ಇಲ್ಲಿನ ಶ್ರೀರಾಮ ಕಲ್ಯಾಣಮಂಟಪದಲ್ಲಿ ನಡೆದ 57ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಐದು ವರ್ಷಗಳ ಹಿಂದೆ ಬ್ಯಾಂಕ್‌ ₹100 ಕೋಟಿ ಠೇವಣಿ ಹೊಂದಿತ್ತು. ಈ ಠೇವಣಿಯ ಮೊತ್ತ ₹302 ಕೋಟಿಗೆ ಏರಿಕೆಯಾಗಿದೆ. ಜಿಲ್ಲೆಯ 41,508 ರೈತರಿಗೆ ₹203 ಕೋಟಿ ಸಾಲ ವಿತರಿಸಿದೆ. 47 ಕೋಟಿಯನ್ನು ಕೃಷಿ ಭೂ ಅಭಿವೃದ್ಧಿ ಸಾಲವಾಗಿ ವಿತರಿಸಲಾಗಿದೆ. ಲಾಂಭಾಂಶದಲ್ಲಿ ಸದಸ್ಯರಿಗೆ ಶೇ2ರಷ್ಟು ಡಿವಿಡೆಂಟ್‌ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಡಿಸಿಸಿ ಬ್ಯಾಂಕಿನಲ್ಲಿ ಇಡುವ ಠೇವಣಿಗೆ ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕುಗಳಿಗಿಂತ ಶೇ 1ರಷ್ಟು ಹೆಚ್ಚು ಬಡ್ಡಿ ದರವಿದೆ. ಇದರಿಂದ ಠೇವಣಿದಾರರಿಗೆ ಅನುಕೂಲವಾಗಲಿದ್ದು, ಹೆಚ್ಚು ಠೇವಣಿ ಇಡಲು ಆಸಕ್ತಿ ತೋರಬೇಕಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸ್ವಸಹಾಯ ಗುಂಪುಗಳಿಗೂ ಬ್ಯಾಂಕ್‌ ಆರ್ಥಿಕ ನೆರವು ನೀಡುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಆದ್ಯತೆ ಮೇಲೆ ಕೃಷಿ ಸಾಲ ನೀಡಲಾಗುವುದು. 2020-21ನೇ ಸಾಲಿನಲ್ಲಿ ರೈತರಿಗೆ ₹250 ಕೋಟಿ ಬೆಳೆಸಾಲ ಮತ್ತು ₹50 ಕೋಟಿ ಭೂ ಅಭಿವೃದ್ಧಿ ಸಾಲ ನೀಡಲು ಗುರಿ ಹಾಕಿಕೊಳ್ಳಲಾಗಿದೆ. ಕೋವಿಡ್‌ ಕಾರಣಕ್ಕೆ ಸಾಲ ಮರುಪಾವತಿ ಅವಧಿಯನ್ನು ಆರ್‌ಬಿಐ ಆರು ತಿಂಗಳು ಮುಂದೂಡಿದೆ. ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT