ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಆರೋಪ: ಪ್ರತಿಭಟನೆ

7

ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಆರೋಪ: ಪ್ರತಿಭಟನೆ

Published:
Updated:
Deccan Herald

ಹೊಸದುರ್ಗ: ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಮಂಜುನಾಥ್‌ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ತಾಲ್ಲೂಕು ನಾಯಕ ಸಮಾಜ ಹಾಗೂ ಕಿಚ್ಚ ಸುದೀಪ್‌ ಸೇನಾ ಸಮಿತಿಯವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

‘ಮಂಜುನಾಥ್‌ ಹೊಸದುರ್ಗ ಉಪ್ಪಾರ್‌’ ಖಾತೆಯಲ್ಲಿ ನಾಯಕ ಸಮುದಾಯದ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಭಾವಚಿತ್ರ ಬಳಸಲಾಗಿದೆ. ಜಾತಿ ಹೆಸರು ಹೇಳಿಕೊಂಡು ಓಡಾಡುವ ಇಂತಹ ಸ್ವಾಮೀಜಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ನಂತರ ಪ್ರಸನ್ನಾನಂದಪುರಿ ಸ್ವಾಮೀಜಿ ಬಗ್ಗೆ ತುಂಬಾ ಅಶ್ಲೀಲವಾಗಿ ಕಾಮೆಂಟ್‌ ಬರಲು ಕಾರಣನಾಗಿದ್ದಾನೆ’ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

‘ಮಂಜುನಾಥ್‌ ಸ್ವಾಮೀಜಿ ಅವರ ಭಾವಚಿತ್ರ ಬಳಸಿದ್ದಲ್ಲದೇ, ಅವರನ್ನು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾನೆ. ಇದರಿಂದ ಗುರುಗಳಿಗೆ ಹಾಗೂ ಸಮುದಾಯದವರಿಗೆ ತುಂಬಾ ನೋವಾಗಿದೆ. ಹಾಗಾಗಿ ಈತನ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಕಚೇರಿ ಹಾಗೂ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದರು.

ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ದೇವರಾಜು, ಮುಖಂಡರಾದ ನಾಗಪ್ಪ, ಹನುಮಂತಪ್ಪ, ಕೆಂಚಪ್ಪ, ಮಂಜುನಾಥ್‌, ಪಾಳೆಗಾರ ಸಿದ್ದೇಶ್‌, ವಿಜಯಕುಮಾರ್‌, ತಿಪ್ಪೇಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !