ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ತೋಟಕ್ಕೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

Published 16 ಏಪ್ರಿಲ್ 2024, 15:44 IST
Last Updated 16 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಅಂಬಲಗೆರೆ ಗ್ರಾಮದ ಮಹಾಂತೇಶ್ ಅವರ ತೋಟದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ನೂರಾರು ಅಡಿಕೆ ಮತ್ತು ಬಾಳೆ ಗಿಡಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಹುಲಗಲಕುಂಟೆ ಗ್ರಾಮ: ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಗಿರೀಶ್ ಅವರ  ತೋಟದಲ್ಲಿನ ಕಾಲು ಎಕರೆ  ಕನಕಾಂಬರ ಗಿಡಗಳು, 3 ತೆಂಗಿನ ಮರಗಳು, ಸಣ್ಣಪ್ಪ ಅವರ ತೋಟದಲ್ಲಿನ 5 ತೆಂಗಿನ ಮರಗಳು, ಹೇಮಾವತಿ ಅವರ ತೋಟದಲ್ಲಿನ 7 ತೆಂಗಿನ ಮರಗಳು, ರಂಗನಾಥ್ ಮತ್ತು ಪ್ರಹ್ಲಾದ್ ಅವರ ತೋಟದಲ್ಲಿನ ತಲಾ 3 ತೆಂಗಿನ ಮರಗಳು ಸುಟ್ಟು ಹೋಗಿವೆ.

ಕಿಡಿಗೇಡಿಗಳು ತೋಟದ ಬೇಲಿಗೆ ಬೀಡಿ ಅಥವಾ ಸಿಗರೇಟ್ ಸೇದಿ ಬಿಸಾಡಿದ ತುಂಡಿನಿಂದ ಬೆಂಕಿ ಹತ್ತಿರಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT