ಬುಧವಾರ, ಸೆಪ್ಟೆಂಬರ್ 28, 2022
26 °C

ದೇಶ ವಿಭಜನೆ ಮರೆಯಲು ಅಸಾಧ್ಯ: ಆರ್‌.ಚಂದ್ರಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಇರುವಾಗ ನಡೆದ ದೇಶ ವಿಭಜನೆಯಿಂದಾಗಿ ಕೋಟ್ಯಂತರ ಜನರು ವಲಸೆ ಹೋಗುವ ಸಂದರ್ಭ ಎದುರಾಯಿತು. ಈ ಕಹಿ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದೇಶ ವಿಭಜನೆಯ ಕರಾಳತೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮನುಕುಲದ ಇತಿಹಾಸದಲ್ಲಿ ಜರುಗಿದ ಅತಿದೊಡ್ಡ ಮಾನವ ವಲಸೆ ಇದಾಗಿದೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತಿಹಾಸ ಪುಟಗಳಲ್ಲಿ ದಾಖಲಾದ ಈ ಕಹಿ ಘಟನೆ ಮರೆಯಲು ಅಸಾಧ್ಯ. ದೇಶ ವಿಭಜನೆ ವೇಳೆ ನಡೆದ ತ್ಯಾಗ ಬಲಿದಾನಗಳ ಗೌರವಾರ್ಥವಾಗಿ ಪ್ರಧಾನಿ ಆ.14ರಂದು ದೇಶ ವಿಭಜನೆಯ ಕರಾಳ ದಿನವಾಗಿ ಆಚರಿಸಲು ಕರೆ ನೀಡಿದ್ದಾರೆ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್‌, ಎಸ್‌.ಚಂದ್ರಶೇಖರ್‌, ಎಂ.ಜೆ.ಬೋರೇಶ, ಅಂಜನಮೂರ್ತಿ, ಪ್ರಶಿಕ್ಷಣಾರ್ಥಿಗಳಾದ ಆನಂದಪ್ಪ, ಲಕ್ಷ್ಮೀಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.