ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯನಿಧಿ ಸ್ಟಾಲಿನ್ ಬೊಗಳಿದರೆ ಹಿಂದೂ ಧರ್ಮ ಹಾಳಾಗದು: ಕಾಡಸಿದ್ದೇಶ್ವರ ಸ್ವಾಮೀಜಿ

Published 8 ಅಕ್ಟೋಬರ್ 2023, 6:27 IST
Last Updated 8 ಅಕ್ಟೋಬರ್ 2023, 6:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಕ್ರಿಶ್ಚಿಯನ್ ಏಜೆಂಟ್ ಆಗಿದ್ದ ಪೆರಿಯಾರ್ ರಾಮಸ್ವಾಮಿ ಅವರಿಂದ ಹಿಂದೂ ಧರ್ಮ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇವರಿಂದ ಪ್ರೇರಣೆಗೊಂಡು ಉದಯನಿಧಿ ಸ್ಟಾಲಿನ್ ಬೊಗಳಲು ಆರಂಭಿಸಿದ್ದಾರೆ. ಇದರಿಂದ ಹಿಂದೂ ಧರ್ಮ ಇನ್ನಷ್ಟು ಗಟ್ಟಿಯಾಗಲಿದೆಯೇ ಹೊರತು ಹಾಳಾಗದು ಎಂದು ಕೊಲ್ಲಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕಿಡಿಕಾರಿದರು.

ಇಲ್ಲಿನ‌ ಜೈನಧಾಮದಲ್ಲಿ ಬಜರಂಗದಳ ಮತ್ತು‌ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಮಿಳುನಾಡಿನ ಹುಡುಗ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮದ ಬಗ್ಗೆ ಬೊಗಳಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂ ಧರ್ಮದ ವಿರುದ್ಧವೇ ಮಾತನಾಡುತ್ತಿರುವವರಿಗೆ ಗಣೇಶ ಸದ್ಬುದ್ದಿ ಕೊಡಲಿ ಎಂದರು.

'ದೇಶದಲ್ಲಿ 80 ರಿಂದ 90 ಕೋಟಿ ಹಿಂದೂಗಳು ಇದ್ದೇವೆ. ಹೀನ ಭಾವನೆ ಹೊಂದದೇ ಎಲ್ಲರೊಂದಿಗೆ ಬದುಕುವ ಮನೋಭಾವ ಹೊಂದಿದ್ದೇವೆ. ಸನಾತನ ಧರ್ಮ ವಿಶಿಷ್ಟವಾಗಿದ್ದು. ವೈಜ್ಞಾನಿಕ ವಿಚಾರಗಳನ್ನು ಪಾಲನೆ ಮಾಡುತ್ತದೆ. ಜಾತಿ, ಪಂಥ ನಿರಪೇಕ್ಷತೆ ಸನಾತನ ಧರ್ಮದಲ್ಲಿದೆ. ಇಷ್ವವಾದ ದೇವರನ್ನು ಪೂಜಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ' ಎಂದು‌ ಹೇಳಿದರು.

'ಬಾಲ ಗಂಗಾಧರನಾಥ ತಿಲಕರು ಗಣಪತಿ ಆರಾಧನೆ ಶುರು ಮಾಡಿದರು. ಮಹಾರಾಷ್ಟ್ರ ಮೀರಿಸುವ ರೀತಿಯಲ್ಲಿ ಗಣೇಶ ಉತ್ಸವ ಕರ್ನಾಟಕದಲ್ಲಿ ನಡೆಯುತ್ತಿದೆ. ಇದು ಇನ್ನಷ್ಟು ಅದ್ದೂರಿಯಾಗಿ ನಡೆಯಲಿ' ಎಂದು ಹಾರೈಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಉತ್ಸವ ಸಮಿತಿ ಗೌರವಾಧ್ಯಕ್ಷ ಷಡಾಕ್ಷರಪ್ಪ, ಅಧ್ಯಕ್ಷ ಜಿ.ಎಂ.ಸುರೇಶ್, ಟಿ.ಬದರಿನಾಥ್, ಬಜರಂಗದಳ ಮುಖಂಡ ಪ್ರಭಂಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT