ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ 3 ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಳೀಯ ‘ಸ್ವಿಂಗ್ಸ್ ಕಿಂಗ್ಸ್’ ತಂಡ ಪ್ರಥಮಸ್ಥಾನ ಪಡೆದುಕೊಂಡಿತು.

ಸ್ಥಳೀಯ ಯೂತ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ವಿಂಗ್ಸ್ ಕಿಂಗ್ಸ್ ತಂಡವು ಶಾಡೋ ಸ್ಟ್ರೈಕರ್ಸ್ ತಂಡವನ್ನು ಪರಾಭವಗೊಳಿಸಿತು. ಟೂರ್ನಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ದಿಲೀಪ್, ಬೌಲರ್ ಆಗಿ ಎಸ್.ಪಿ. ಪ್ರಸನ್ನಕುಮಾರ್, ಉತ್ತಮ ಪ್ರದರ್ಶಕನಾಗಿ ತೇಜುಕುಮಾರ್ ಪ್ರಶಸ್ತಿ ಪಡೆದುಕೊಂಡರು.

ವಿಜೇತರಿಗೆ ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು ಬಹುಮಾನ ವಿತರಿಸಿದರು.

ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ಬಾಬು, ಸಹಕಾರ ಯೂನಿಯ್ ನಿರ್ದೇಶಕ ಆರ್. ರಾಮರೆಡ್ಡಿ, ಎಸ್.ಕೆ. ಗುರುಲಿಂಗಪ್ಪ, ಡಿಶ್ ಮುರುಳಿ, ಎಸ್.ಕೆ.ಬಸವರಾಜ್, ಕಾಲಾಡಿ ಮಧು, ಟಿ.ಬಿ. ಅನಂತಕುಮಾರ್, ಜಿ.ಎನ್. ಜಗದೀಶ್, ಆಯೋಜಕರಾದ ಎನ್. ನರಸಿಂಹ, ಡಿ. ತಿಪ್ಪೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.